ಬೆಂಗಳೂರು: ಕೈಗೆ ಕೋಳ ಹಾಕಿದ್ದ ಸಂದರ್ಭದಲ್ಲಿಯೇ ಸಿಗರೇಟ್ ಸೇದಿ ರೌಡಿಶೀಟರ್ ರೀಲ್ಸ್ ಮಾಡಿದ್ದಾನೆ.
ನನ್ನನ್ನು ಬಂಧಿಸಲು ಸಾಧ್ಯವಿಲ್ಲ’ ಎಂದು ವಿಡಿಯೋ ಮಾಡಿ ಹವಾ ಕ್ರಿಯೇಟ್ ಮಾಡುತ್ತಿದ್ದ ಸಿದ್ದಾಪುರ ರೌಡಿಶೀಟರ್ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ (Rowdy Sheeter Rahul) ಈ ರೀಲ್ಸ್ ಮಾಡಿದ್ದಾನೆ.
ಹಿಂದೆ ಕೊಲೆಯ ಯತ್ನದ ಕೇಸ್ ನಲ್ಲಿ ತಾಕತ್ ಇದ್ದರೆ ಹಿಡಿಯಿರಿ ಅವಾಜ್ ಹಾಕಿ ವಿಡಿಯೋ ಮಾಡಿದ್ದ ರಾಹುಲ್ ಮತ್ತೊಂದು ರೀಲ್ಸ್ ಮಾಡಿದ್ದಾನೆ. ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡೆಸಿ ಹೊರ ಕರೆತರುವಾಗ Instagram ರೀಲ್ಸ್ ಮಾಡಿದ್ದಾನೆ. ಪೊಲೀಸರ ಮುಂದೆಯೇ ಸಿಗರೇಟ್ ಸೇದಿ, ರೀಲ್ಸ್ ಮಾಡಿದ್ದಾನೆ. ಹೀಗಾಗಿ ನಗರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಿದವರಿಗೆ ಕೇಸ್ ದಾಖಲು ಮಾಡಲಾಗಿದೆ.
ರಾಹುಲ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 960 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈತ ಪೊಲೀಸರ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದ. ಸಿಸಿಬಿ ಹಾಗೂ ಬೆಂಗಳೂರು ಸೌತ್ ಪೊಲೀಸ್ರು ಪೂರ್ತಿ ಹುಡುಕುತ್ತಿದ್ದಾರೆ. ನಾನು ಸಿಗಲ್ಲ ಎಂದಿದ್ದ. ಇನ್ನೊಬ್ಬ ರೌಡಿಶೀಟರ್ ಸೈಕಲ್ ರವಿ ಅಪ್ತ ಬೇಕರಿ ರಘು ಹತ್ಯೆಗೆ ಯತ್ನಿಸಿರುವುದಾಗಿಯೂ ವಿಡಿಯೋದಲ್ಲಿ ಹೇಳಿದ್ದ. ಈತನ ಮೇಲೆ ಕೊಲೆಯತ್ನ, ಸುಲಿಗೆ, ಡಕಾಯಿತಿ ಸೇರಿದಂತೆ ಅನೇಕ ಪ್ರಕರಣಗಳಿವೆ.