ವಿಜಯಪುರ: ಪತ್ನಿಯ ಮೇಲೆ ಅನುಮಾನಗೊಂಡ ಶಿಕ್ಷಕ ಪತಿರಾಯ, ಪತ್ನಿ ಸೇರಿ ಐವರು ಮೇಲೆ ಮೃಗದಂತೆ ಮಾರಣಾಂತಿಕ ಹಲ್ಲೆ ನಡೆಸಿದರುವ ಘಟನೆ ಬಸವನಾಡು ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಕಡಕೋಳ ಗ್ರಾಮದ ಶಿಕ್ಷಕ ಸಿದ್ರಾಮಪ್ಪ ದತ್ತಪ್ಪ ಮುಳಸಾವಳಗಿ(50) ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಪತ್ನಿಯ ಶೀಲ ಶಂಕಿಸಿ ಆಕೆಯ ಕೊಲೆಗೆ ಸಂಚು ರೂಪಿಸಿದ್ದ ಸಿದ್ರಾಮಪ್ಪ, ಕಬ್ಬಿಣದ ಹಾರೆಯಿಂದ ತಲೆಗೆ ಹೊಡೆದಿದ್ದಾರೆ. ಪತ್ನಿ ಮೇಲೆ ಹಲ್ಲೆ ಬಿಡಿಸಲು ಬಂದಿದ್ದ ತಂದೆ, ತಾಯಿ ಹಾಗೂ 10 ವರ್ಷದ ಇಬ್ಬರು ಮಕ್ಕಳ ಮೇಲೆಯೂ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಐವರನ್ನ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸವನಬಾಗೇಬಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಮಾಡಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಿದ್ರಾಮಪ್ಪ, ಬಸವನಬಾಗೇವಾಡಿ ತಾಲೂಕು ಸರ್ಕಾರಿ ಶಿಕ್ಷಕರ ಸಂಘದ ಉಪಾಧ್ಯಕ್ಷನಾಗಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








