ತುಮಕೂರು: ವ್ಯಕ್ತಿಯೊಬ್ಬ ಪ್ರೀತಿಸಿದವಳನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಯುವತಿಯ ಶವ ಜಿಲ್ಲೆಯ ಜಿಲ್ಲೆಯ ದೊಡ್ಡಗುಣಿ ರಸ್ತೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸರಿಗೆ ಈ ಕುರಿತು ಮಾಹಿತಿ ಸಿಕ್ಕಿದೆ. ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಎಸಿ ನಗರದ ರುಕ್ಸಾನಾ(21) ಕೊಲೆಯಾಗಿರುವ ಮಹಿಳೆ. ರುಕ್ಸಾನಾ ಮೈಸೂರಿನಲ್ಲಿನ ಪೇಯಿಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ನಾಯಕ್ ಎಂಬಾತನ ಪರಿಚಯವಾಗಿದೆ. ಈತನಿಗೆ ಮದುವೆಯಾಗಿ ಮಕ್ಕಳಿವೆ. ಆದರೂ ಇಬ್ಬರು ಪ್ರೀತಿಸಲು ಆರಂಭಿಸಿದ್ದಾರೆ.
ತ್ತೀಚೆಗೆ ಪ್ರದಿಪ್ ನಾಯಕ್ ಮೈಸೂರು ಬಿಟ್ಟು ಬೆಂಗಳೂರು ಸೇರಿದ್ದಾನೆ. ಆದರೂ ಈಕೆ ಮೈಸೂರಿಗೆ ಬರುವಂತೆ ಪೀಡಿಸುತ್ತಿದ್ದಳು ಎನ್ನಲಾಗಿದೆ. ಈ ಮಧ್ಯೆ ರುಕ್ಸಾನಾ ಗರ್ಭಿಣಿಯಾಗಿದ್ದಾಳೆ. ಆನಂತರ ರುಕ್ಸಾನಾಳನ್ನು ರೂಮ್ ಮಾಡಿ, ಕಡೂರಿನಲ್ಲಿ ಇಟ್ಟಿದ್ದಾನೆ. ಕಳೆದ ಒಂದು ತಿಂಗಳ ಹಿಂದೆ ರುಕ್ಸಾನಾಗೆ ಹೆರಿಗೆ ಆಗಿದೆ. ಪ್ರದೀಪ್ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದ ಎನ್ನಲಾಗಿದೆ.
ಆನಂತರ ರುಕ್ಸಾನಾ, ಮೊದಲ ಪತ್ನಿ ಬಿಟ್ಟು ನನ್ನ ಮದುವೆಯಾಗು ಎಂದ ಪೀಡಿಸಲು ಆರಂಭಿಸಿದ್ದಾಳೆ. ಆಗಲೇ ಆತ ಕೊಲೆ ಮಾಡಲು ನಿರ್ಧರಿಸಿ, ಒಂದು ತಿಂಗಳ ಮಗು ಸೇರಿದಂತೆ ರುಕ್ಸಾನಾಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ದಾರಿ ಮಧ್ಯೆ ತನ್ನ ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಂಡು ಹೆಚ್ಚುವರಿ 2 ಲೀಟರ್ ಪೆಟ್ರೋಲ್ ನ್ನು ಬಾಟಲಿಗೆ ಹಾಕಿಸಿಕೊಂಡಿದ್ದಾನೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಹತ್ತಿರ ಬಂದಾಗ ಬೈಕ್ ನಿಲ್ಲಿಸಿದ್ದಾನೆ. ಆಗ ವೇಲ್ ನಿಂದ ರುಕ್ಸಾನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್ ನಿಂದ ಸುಟ್ಟಿದ್ದಾನೆ. ನಂತರ ಮಗುವನ್ನು ನೆಲಮಂಗಲದ ಬಳಿ ಎಸೆದು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಆರೋಪಿ ಬಂಧಿಸಿ ಜೈಲಿಗಟ್ಟಿದ್ದಾರೆ.