ಕ್ರೂರ ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಅಮೃತಸರದಲ್ಲಿ ನಡೆದಿದೆ. 23 ವರ್ಷದ ಮಹಿಳೆ 6 ತಿಂಗಳ ಗರ್ಭಿಣಿಯಾಗಿದ್ದರು. ಅವಳಿ ಮಕ್ಕಳು ಹೊಟ್ಟೆಯಲ್ಲಿದ್ದವು. ಆದರೆ, ಯಾವುದೋ ಕಾರಣಕ್ಕೆ ಜಗಳ ನಡೆಯಿತೆಂದು ಕೋಪದಲ್ಲಿ ಭರದಲ್ಲಿ ಪಾಪಿಯು ಮಂಚಕ್ಕೆ ಪತ್ನಿ ಕಟ್ಟಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.
ಪಿಂಕಿ ಬೆಂಕಿಯಲ್ಲಿ ಸುಟ್ಟು ಹೋದ ದುರ್ದೈವ ಪತ್ನಿಯಾಗಿದ್ದರೆ, ಸುಖದೇವ್ ಬೆಂಕಿ ಹಚ್ಚಿರುವ ಕ್ರೂರಿ. ಸದ್ಯ ಆತ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಸುಖದೇವ್ ಹಾಗೂ ಪಿಂಕಿ ಕಳೆದ ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು.
ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶುಕ್ರವಾರ ಕೂಡ ಯಾವುದೋ ವಿಷಯಕ್ಕೆ ಜಗಳ ನಡೆದಿದೆ. ಆದರೆ, ಪಾಪಿಯು ಜಗಳದಲ್ಲಿ ಪತ್ನಿಯನ್ನೇ ಸುಟ್ಟಿದ್ದಾನೆ. ಈ ಘಟನೆಗೆ ರಾಷ್ಟ್ರೀಯ ಮಹಿಳಾ ಆಯೋಗ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.