ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು – ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ರವಿವಾರ ಬೆಳಿಗ್ಗೆ ವಿದ್ಯುತ್ ಸ್ಪರ್ಶದಿಂದ ತಂಗಿಯನ್ನು ಸಂರಕ್ಷಿಸಿ ಅಕ್ಕ ಪ್ರಾಣ ಬಿಟ್ಟಿದ್ದಾಳೆ.
ಗುಂಡಪ್ಪ ಜಾಯ್ಕನವರ ತಮ್ಮ ನಿವಾಸದ ಮುಂದೆ ಹಾಕಿರುವ ತಗಡಿನ ಶೆಡ್‍ಗೆ ಸರ್ವಿಸ್ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರಸರಣವಾದ ಪರಿಣಾಮ ಮಗಳಿಗೆ ವಿದ್ಯುತ್ ತಂತಿ ತಗುಲಿತ್ತು. ಆ ಸುದ್ದಿ ತಿಳಿದ ಮನೆಯ ಒಳಗೆ ಕುಳಿತಿದ್ದ ಮತ್ತೊಬ್ಬ ಮಗಳು ಸಂಜೋತಾ ಗುಂಡಪ್ಪ ಜಾಯ್ಕನವರ (22) ತನ್ನ ತಂಗಿಗೆ ಶಾಕ್ ಸಕ್ರ್ಯೂಟ್‍ನಿಂದ ಸಂರಕ್ಷಿಸಲು ನೀರು ತರಲು ಹೋಗಿ ತನ್ನ ನಿಯಂತ್ರಣ ತಪ್ಪಿ ವಿದ್ಯುತ್ ತಂತಿ ಮೇಲೆ ಬಿದ್ದು ಸ್ಥಳದಲ್ಲಿ ಮೃತ ಪಟ್ಟಿದ್ದಾಳೆ. ತಂಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮೃತ ಸಂಜೋತಾ ಕೆಪಿಎಸ್ ಹಾಗೂ ಪಿಎಸೈ ಪರೀಕ್ಷೆಯನ್ನು ಬರೆದಿದ್ದಳು.
ಘಟನೆ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಪೊಲೀಸ್‍ರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.
FIFA 2026 : ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?
FIFA 2026 : ಅದು ಹಚ್ಚ ಹಸಿರಿನ ಹೈಬ್ರಿಡ್ ಹುಲ್ಲು ಹಾಗೂ ಸ್ವಲ್ಪ ಕೃತಕ ಪ್ಲಾಸ್ಟಿಕ್ ನಾರುಗಳಿಂದ ಸಿದ್ದಗೊಂಡಿರುವ ಆಯತಾಕಾರದ ವಿನ್ಯಾಸದ ಫುಟ್‍ಬಾಲ್ ಮೈದಾನ. 105 ಮೀಟರ್...








