ರಾಯಚೂರು: ಫಿನಾಯಿಲ್ ವಾಸನೆಗೆ ಮೂರ್ಛೆ ತಪ್ಪಿದ ಹಾವನ್ನು ರಕ್ಷಿಸಲಾಗಿದೆ.
ಈ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದಿದೆ. ಕೃತಕ ಆಮ್ಲಜನಕದಿಂದ ಮತ್ತೆ ಹಾವಿಗೆ ಮರು ಜೀವ ನೀಡಲಾಗಿದೆ.
ಇನೋವಾ ಕಾರಿನಲ್ಲಿ ಏಕಾ ಏಕಿ ನಾಗರ ಹಾವು ಪ್ರತ್ಯಕ್ಷವಾಗಿದೆ. ಹಾವು ಹೊರ ಬಾರದ ಹಿನ್ನೆಲೆಯಲ್ಲಿ ಕಾರು ಚಾಲಕ ಫಿನಾಯಿಲ್ ಸಿಂಪಡನೆ ಮಾಡಿದ್ದಾರೆ. ಹೀಗಾಗಿ ಇದರ ವಾಸನೆಗೆ ನಾಗರಹಾವು ಮೂರ್ಛೆ ತಪ್ಪಿದೆ. ನಂತರ ಉರಗ ತಜ್ಞ ಖಾಲೀದ್ ಚಾವೂಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ ಮಾಡಲಾಗಿದೆ. ನಂತರ ಉರಗತಜ್ಞ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.