ಬೆಂಗಳೂರು: ನಮ್ಮ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಸ್ಟಂಟ್ ಮಾಡಿದ್ದು, ಆತನಿಕೆ ತಕ್ಕ ಶಾಸ್ತಿ ಮಾಡಲಾಗಿದೆ.
ವಿದ್ಯಾರ್ಥಿಯೊಬ್ಬ ಮೆಟ್ರೋ ರೈಲಿನ (Namma Metro) ಹ್ಯಾಂಡಲ್ ಹಿಡಿದು ಬ್ಯಾಕ್ ಫ್ಲಿಪ್ ಸ್ಟಂಟ್ ಮಾಡಿದ್ದಾನೆ. ಕೂಡಲೇ ಆತನಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ರೂ. 500 ದಂಡ ವಿಧಿಸಿ, ಎಚ್ಚರಿಕೆ ನೀಡಲಾಗಿದೆ.
ವಿದ್ಯಾರ್ಥಿ ಮಾಡಿದ್ದ ಸ್ಟಂಟ್ ನ ವಿಡಿಯೋವನ್ನು ಆತನ ಇನ್ನೊಬ್ಬ ಸ್ನೇಹಿತ ಮಾಡಿದ್ದ. ಈ ವಿಚಾರ ಬಿಎಂಆರ್ ಸಿಎಲ್ ಸಿಬ್ಬಂದಿಗೆ ತಿಳಿದಿತ್ತು. ನಂತರ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿ ಮೆಟ್ರೋಯಿಂದ ಹೊರ ಹೋಗುವ ವೇಳೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.