ಶಾಲಾ ಬಸ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನರು ಸಾವನ್ನಪ್ಪಿರುವ ಘಟನೆ ಗಾಜಿಯಾಬಾದ್ (Ghaziabad) ಹತ್ತಿರದ ದೆಹಲಿ-ಮೀರತ್ ಎಕ್ಸ್ಪ್ರೆಸ್ವೇಯಲ್ಲಿ (Delhi-Meerut Expressway) ನಡೆದಿದೆ.
ಖಾಲಿ ಇದ್ದ ಶಾಲಾ ಬಸ್ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿತ್ತು. ಹೀಗಾಗಿ ಇದೇ ಮಾರ್ಗವಾಗಿ ವೇಗವಾಗಿ ಬರುತ್ತಿದ್ದ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿ 6 ಜನ ಸಾವನ್ನಪ್ಪಿದ್ದಾರೆ. ಎಡಿಸಿಪಿ ಆರ್ಕೆ ಕುಶ್ವಾಹ ಅಪಘಾತದ ಕುರಿತು ಮಾಹಿತಿ ನೀಡಿ, ಕಾರಿನಲ್ಲಿದ್ದ 6 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ದೆಹಲಿಯ ಗಾಜಿಪುರದಿಂದ ಸಿಎನ್ಜಿ ಪಡೆದು ಬಸ್ ಚಾಲಕ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ, ಟಿಯುವಿ ಮೀರತ್ನಿಂದ ಗುರುಗ್ರಾಮ್ಗೆ ತೆರಳುತ್ತಿತ್ತು ಎಂದು ತಿಳಿಸಿದ್ದಾರೆ.