ಬೆಂಗಳೂರು: ಕಾರು ಡ್ರೈವಿಂಗ್ (Car Driving) ಕಲಿಸಲು ಹೋಗಿ ಭೀಕರ ಅಪಘಾತ ಸಂಭವಿಸಿದ ಪರಿಣಾಮ 8 ಬೈಕ್ ಗಳು ಜಖಂ ಆಗಿವೆ.
ಅಪಘಾತ (Accident) ಸಂಭವಿಸಿದ ಪರಿಣಾಮ 8 ಬೈಕ್ಗಳು (Bike) ಡ್ಯಾಮೇಜ್ ಆಗಿರುವ ಈ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಕೆಎಲ್ಇ ಲಾ ಕಾಲೇಜು ಹತ್ತಿರ ಈ ಅಪಘಾತ ನಡೆದಿದ್ದು, ಡ್ರೈವಿಂಗ್ ಕಲಿಸುತ್ತಿದ್ದ ಕಾರು ಬೇಕರಿ ಹತ್ತಿರ ನಿಂತಿದ್ದ 8 ಕಾರುಗಳಿಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಎಂಟು ಬೈಕ್ ಗಳು ಸಂಪೂರ್ಣ ಹಾನಿಯಾಗಿವೆ.
ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಅನಾಹುತ ನಡೆದಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಕುರಿತು ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.