ರೆಸ್ಟೋರೆಂಟ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮುಂಬಯಿನಲ್ಲಿ ನಡೆದಿದೆ.
ಅಲ್ಲಿಯ ಗ್ರಾಂಟ್ ರಸ್ತೆಯ ಕಮಾಟಿಪುರದ ರೆಸ್ಟೋರೆಂಟ್ ವೊಂದರದಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ. ಆವರಣದಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ದೇಹ ಪತ್ತೆಯಾಗಿದೆ. ಬೆಳಗಿನ ಜಾವ 2 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, 16 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಯತ್ನಿಸಿವೆ.
ಹತ್ತಿರದ ಮಾಲ್ ಮತ್ತು ಬಹುಮಹಡಿ ಕಟ್ಟಡವನ್ನು ಖಾಲಿ ಮಾಡಲಾಗಿದೆ. ಗಾಯಗೊಂಡವರ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ, ಅಪರಿಚಿತ ವ್ಯಕ್ತಿಯ ಸುಟ್ಟ ದೇಹವು ಆವರಣದಲ್ಲಿನ ಸ್ನಾನ ಗೃಹದಲ್ಲಿ ಕಂಡು ಬಂದಿದೆ.