ಬೆಂಗಳೂರು: ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ತಲೆಯ ಮೇಲೆ ಮರದ ಕೊಂಬೆ ಬಿದ್ದ ಘಟನೆಯೊಂದು ನಡೆದಿದೆ.
ಮರದ ಕೊಂಬೆಯ ತಲೆಯ ಮೇಲೆ ಬಿದ್ದಿದ್ದರಿಂದಾಗಿ ಮೆದುಳಿನ ಭಾಗದಲ್ಲಿ ರಕ್ತ ಸ್ರಾವವಾಗಿ ವ್ಯಕ್ತಿಯು ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ. ಸದ್ಯ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ (surgery) ಮಾಡಿ ವ್ಯಕ್ತಿಯ ಪ್ರಾಣ ಕಾಪಾಡಿದ್ದಾರೆ.
ಈ ಕುರಿತು ವೈದ್ಯ ಡಾ.ರಾಜಕುಮಾರ್ ದೇಶಪಾಂಡೆ ಮಾತನಾಡಿ, ಕೊಂಬೆಯೊಂದು ನೇರವಾಗಿ ಅವರ ತಲೆ ಮೇಲೆ ಬಿದ್ದ ಪರಿಣಾಮ ತಲೆಗೆ ತೀವ್ರತರವಾದ ಹೆಚ್ಚಿನ ರಕ್ತ ಸೋರಿತ್ತು.
ಮೆದುಳಿಗೆ ಹಾನಿಯಾಗಿರುವ ಸಾಧ್ಯತೆ ಮೇಲ್ನೋಟಕ್ಕೆ ತಿಳಿದುಬಂದಿದ್ದರಿಂದ ಕೂಡಲೇ ಅವರನ್ನು ಸಿಟಿಗೆ ಒಳಪಡಿಸಲಾಯಿತು. ಮೆದುಳಿನಲ್ಲಿ ಆವರಿಸುವ ಪೊರೆಗಳ ನಡುವೆ (ಮೆನಿಂಜಸ್) ಬಲಭಾಗದಲ್ಲಿ 1.6 ಸೆಂ.ಮೀ ದಪ್ಪದಲ್ಲಿ ರಕ್ತ ಸ್ರಾವ ಆಗಿ ಹೆಪ್ಪುಗಟ್ಟುತ್ತಿರುವುದು ಕಂಡು ಬಂದಿತೂ. ಕಣ್ಣು, ಹಣೆ, ಕೆನ್ನೆಯ ಮೂಳೆಗಳು ಸಹ ಮುರಿದಿದ್ದವು. ತಲೆಯ ಬಲಭಾಗದಲ್ಲಿರುವ ತಲೆಬುರುಡೆಯ ಮೂಳೆಯ ಭಾಗವನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಸೂಕ್ಷ್ಮವಾಗಿ ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದೇವು. ಹೀಗಾಗಿ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.