ಲಕ್ನೋ: ಮನೆಗೆ ಬಂದಿದ್ದ ಅತಿಥಿಗಳ ಮೇಲೆ ಮುಸುರೆ ತಟ್ಟೆ ಬಿದ್ದ ಪರಿಣಾಮ ವೈಟರ್ ನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ಅಂಕುರ್ ವಿಹಾರ್ ಸಿಜಿಎಸ್ ವಾಟಿಕಾದಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಪಂಕಜ್ ಹತ್ಯೆಯಾಗಿರುವ ವ್ಯಕ್ತಿ ಎನ್ನಲಾಗಿದೆ. ಮದುವೆ ಮನೆಯಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ಮುಸುರೆ ತಟ್ಟೆಗಳು ಅತಿಥಿ ರಿಷಬ್ ಹಾಗೂ ಆತನ ಇಬ್ಬರು ಸ್ನೇಹಿತರ ಮೇಲೆ ಬಿದ್ದಿವೆ.
ಮುಸುರೆ ತಟ್ಟೆಗಳು ತಮ್ಮ ಮೇಲೆ ಬಿದ್ದ ಪರಿಣಾಮ ರಿಷಬ್ ಸಿಟ್ಟಾಗಿ ವೈಟರ್ ಪಂಕಜ್‌ನೊಂದಿಗೆ ಜಗಳ ತೆಗೆದಿದ್ದಾನೆ. ಇದು ಅತಿರೇಕಕ್ಕೆ ಹೋಗಿದೆ. ಈ ಸಂದರ್ಭದಲ್ಲಿ ಪಂಕಜ್ ನನ್ನು ನೆಲಕ್ಕೆ ಬೀಳಿಸಿ ರಿಷಬ್ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ರಿಷಬ್ ಹಾಗೂ ಆತನ ಸ್ನೇಹಿತರಾದ ಮನೋಜ್ ಹಾಗೂ ಅಮಿತ್ ಪಂಕಜ್‌ನ ಶವವನ್ನು ಹತ್ತಿರದ ಕಾಡಿಗೆ ಒಯ್ದು ಮುಚ್ಚಿಟ್ಟಿದ್ದಾರೆ. ಸದ್ಯ ಪೊಲೀಸರು ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.