ಪತಿ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಬೆಂಗಳೂರು: ಪತಿ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಾಯತ್ರಿ ನಗರದಲ್ಲಿ ನಡೆದಿದೆ.
ಇಂದುಶ್ರೀ (28) ಮೃತ ದುರ್ದೈವಿ. ಇವರು ರಾಕೇಶ ಅನ್ನೋ ವ್ಯಕ್ತಿಯನ್ನು ಮದವೆಯಾಗಿದ್ದರು. ರಾಕೇಶ ಮತ್ತು ಇಂದುಶ್ರೀ ಕಳೆದ ಎರಡು ವರ್ಷಗಳಿಂದ ಪ್ರೀತಿಸಿದ್ದರು. 9 ತಿಂಗಳ ಹಿಂದೆ ಅವರು ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು.
ವಿವಾಹವಾದ ಬಳಿಕ ಕೆಲವು ದಿನಗಳವರೆಗೆ ಚೆನ್ನಾಗಿಯೇ ಇದ್ದರು, ಆದರೆ ಕೆಲ ದಿನಗಳು ಕಳೆದ ಬಳಿಕ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ನೊಂದ ಮಹಿಳೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
ಡೆತ್ನೋಟ್ನಲ್ಲಿ ತನ್ನ ಗಂಡನಿಗೆ ಇತರ ಯುವತಿಯರ ಜೊತೆ ಸಂಬಂಧವಿದೆ ಎಂದು ಉಲ್ಲೇಖಿಸಿದ್ದು, ಇಂದುಶ್ರೀ ತಂದೆಯ ದೂರಿನನ್ವಯ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.









