ಮಹಿಳೆಯೊಬ್ಬರು ಜಿರಾಫೆಯ ಮಲ ತಂದು ಕಸ್ಟಮ್ಸ್ ಅಧಿಕಾರಿಗಳಿಗೆ ದಂಡ ಕಟ್ಟಿರುವ ಘಟನೆ ಅಮೆರಿಕದ ಮಿನ್ನಿಯಾಪೊಲಿಸ್ ನಗರದ ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮಹಿಳೆಯನ್ನು ವಿಚಾರಣೆಗೊಳಪಡಿಸಿದಾಗ ಅಧಿಕಾರಿಗಳು ದಂಗಾಗಿದ್ದು, ಹಲವರು ಪ್ರಶ್ನಿಸಿದ್ದಾರೆ.ಈ ಘಟ
ನೆ ಸೆಪ್ಟೆಂಬರ್ 29 ರಂದು ನಡೆದ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಮೆರಿಕದ ಮಿನ್ನಿಯಾಪೊಲಿಸ್ ನಗರದ ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯ ಲಗೇಜ್ ಚೆಕ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮಹಿಳೆಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಪೂರ್ವ ಆಫ್ರಿಕಾ ದೇಶವಾದ ಕೀನ್ಯಾದಿಂದ ಜಿರಾಫೆಯ ಮಲವನ್ನು ತಂದಿರುವುದಾಗಿ ಮಹಿಳೆ ಹೇಳಿದ್ದಾರೆ. ನೆಕ್ಲೆಸ್ ಮಾಡಿಕೊಳ್ಳಲು ಜಿರಾಫೆಯ ಮಲ ತಂದಿದ್ದಾಗಿ ಮಹಿಳೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.