ನಮ್ಮ ಪರಿಸರದಲ್ಲಿ ಆಗಾಗ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಹಾಗೆಯೇ ಇಲ್ಲೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ಸತ್ತ 6 ದಿನಗಳ ನಂತರ ಮತ್ತೆ ಹುಟ್ಟಿ ಬಂದಿದ್ದಾರೆ.
ಚೀನಾ (China) ದ ಗುವಾಂಗ್ಸಿಯಲ್ಲಿ ಈ ಘಟನೆ ನಡೆದಿದ್ದು, 95 ವರ್ಷದ ಮಹಿಳೆಯೊಬ್ಬರು ಸತ್ತು ಮತ್ತೆ ಬದುಕಿ ಬಂದಿದ್ದಾರೆ ಎನ್ನಲಾಗಿದೆ. ಅಕ್ಕಪಕ್ಕದ ಮನೆಯವರು ಆ ಮಹಿಳೆ ಸತ್ತಿದ್ದಾರೆ ಎಂದು ಭಾವಿಸಿದ್ದರು. ಆದರೆ, ಅವರು ಮತ್ತೆ ಅಡುಗೆ ಮಾಡುತ್ತಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಲಿ ಕ್ಸಿಯುಫೆಂಗ್ ತಲೆಗೆ ಪೆಟ್ಟು ಬಿದ್ದಿತ್ತು. ಹೀಗಾಗಿ ಅವರು ಮನೆಯಲ್ಲಿಯೇ ಮಲಗಿದ್ದರು. ಹೀಗಾಗಿ ನೆರೆಹೊರೆಯವರು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿಲ್ಲ. ದೇಹ (Body) ತಣ್ಣಗಾಗಿರಲಿಲ್ಲ. ಆದ್ರೆ ಉಸಿರಾಟ ನಿಂತಿತ್ತು. ಹೀಗಾಗಿ ಅವರು ಸತ್ತಿದ್ದಾರೆಂದು ಭಾವಿಸಿ, ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು.
ಕುಟುಂಬಸ್ಥರು ಅವಳ ಜೊತೆ ಇರಲಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲು ಆಗಿರಲಿಲ್ಲ. ಅವರನ್ನು ಎಬ್ಬಿಸುವ ಪ್ರಯತ್ನ ಸಾಕಷ್ಟು ಬಾರಿ ನಡೆದಿತ್ತು. ಆದರೆ, ಅವರು ಸ್ಪಂದಿಸಿರಲಿಲ್ಲ. ಹೀಗಾಗಿ ಸಾವನ್ನಪ್ಪಿದ್ದಾರೆಂದು ಭಾವಿಸಿದ್ದರು. ಸಂಬಂಧಿಕರು ಆಕೆಯ ಪಾರ್ಥೀವ ಶರೀರ ನೋಡಲು ಬರುತ್ತೇನೆ ಎಂದ ಕಾರಣಕ್ಕೆ ಲಿ ಕ್ಸಿಯುಫೆಂಗ್ ಶವವನ್ನು ಶವಪೆಟ್ಟಿಗೆಯಲ್ಲಿ ಇಡಲಾಗಿತ್ತು. .ಆದರೆ, ಅದಕ್ಕೆ ಮೊಳೆ ಹೊಡೆದಿರಲಿಲ್ಲ.
ಅವರ ಶವ 6 ದಿನಗಳಿಂದಲೂ ಅದರಲ್ಲಿಯೇ ಇತ್ತು. ಲಿ ಕ್ಸಿಯುಫೆಂಗ್ ಸಂಬಂಧಿಕರು ಮನೆಗೆ ಬಂದ ಕಾರಣ ಶವಪೆಟ್ಟಿಗೆ ತೆರೆಯಲಾಗಿದೆ. ಆದ್ರೆ ಅಲ್ಲಿ ಲಿ ಕ್ಸಿಯುಫೆಂಗ್ ಶವ ಇರಲಿಲ್ಲ. ಇದನ್ನು ಕಂಡು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಲಿ ಕ್ಸಿಯುಫೆಂಗ್, ತುಂಬಾ ಹೊತ್ತಿನಿಂದ ನಾನು ಮಲಗಿದ್ದ ಕಾರಣ ನನಗೆ ಹಸಿವಾಗಿತ್ತು. ಹೀಗಾಗಿ ಅಡುಗೆ ಮಾಡಿಕೊಳ್ಳಲು ಬಂದೆ ಎಂದು ಹೇಳಿದ್ದಾಳೆ.