ಬೆಂಗಳೂರು: ಯುವಕನೊಬ್ಬ ಮಾಜಿ ಪ್ರೇಯಸಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಪೂರ್ವ ವಲಯದಲ್ಲಿ ನಡೆದಿದೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ದೊಡ್ಡಕನ್ನೆಲ್ಲಿಯ ಅಪಾರ್ಟ್ಮೆಂಟ್ ನಿವಾಸಿ 2021ರಿಂದ ಆರೋಪಿತನನ್ನು ಪ್ರೀತಿಸುತ್ತಿದ್ದರು.
ಆದರೆ, ಕೆಲವೇ ದಿನಗಳಲ್ಲಿ, ಮಹಿಳೆಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ. ಹೀಗಾಗಿ ಮಹಿಳೆ ಬ್ರೇಕಪ್ ಮಾಡಿಕೊಂಡಿದ್ದರು. ಆದರೂ ಆತ ಮೆಸೆಜ್ ಮಾಡುವುದು, ಫೋನ್ ಮಾಡುವುದನ್ನು ಮಾಡುತ್ತಿದ್ದ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ, ಮಹಿಳೆಯ ಮನೆಗೆ ಹೋಗಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ಹಾಸಿಗೆಯ ಮೇಲೆ ತಳ್ಳಿ, ಬಾಯಿ ಮುಚ್ಚಿ, ಕಟ್ಟಿಹಾಕಿ ನಿಂದಿಸಲು ಪ್ರಯತ್ನಿಸಿದ್ದಾನೆ. ನಂತರ ಮನೆಯಿಂದ ಹೊರಗೆ ಹೋಗಿ ಬಾಗಿಲು ತಟ್ಟುತ್ತ, ಕರೆ ಮಾಡಿ, ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಾನೆ. ಮಹಿಳೆ ಸದ್ಯ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.