ರಾಮನಗರ: ಯುವಕನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಚನ್ನಪಟ್ಟಣ (Channapatana) ನಗರದ ಸಾತನೂರು ವೃತ್ತದ ಹತ್ತಿರ ನಡೆದಿದೆ. ಬಿಹಾರ ಮೂಲದ ಸಂಜಿತ್ ಕುಮಾರ್ ಠಾಕೂರ್ ( 30) ಸಾವನ್ನಪ್ಪಿದ ಯುವಕ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚನ್ನಪಟ್ಟಣಪುರ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.