ಧಾರವಾಡ: ಮುಸ್ಲಿಂ ಯುವತಿ ಕುಟುಂಬಸ್ಥರ ವಿರೋಧದ ಮಧ್ಯೆಯೂ ಹಿಂದೂ ಯುವಕನ ಕೈ ಹಿಡಿದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಂಜುನಾಥ್ ಹಾಗೂ ಉಮೇದ್ ಮದವೆಯಾದವರು. ಇವರಿಬ್ಬರು ಹಲವು ವರಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ, ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು. ಆದರೆ, ಪ್ರೇಮಿಗಳು ಧರ್ಮ ಮೀರಿ ಪೊಲೀಸ್ ಠಾಣೆಯಲ್ಲಿ ಮದುವೆಯಾಗಿದ್ದಾರೆ.
ತಾಲೂಕಿನ ಬಾಡ ಗ್ರಾಮದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬಸ್ಥರ ವಿರೋಧದ ನಡುವೆಯೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ವಿವಾಹ ನೋಂದಣಿ ಸಹ ಮಾಡಿಕೊಂಡು ಊರು ಬಿಟ್ಟು ಹೋಗಿದ್ದರು. ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರ ದಾಖಲಾಗಿತ್ತು. ಇಬ್ಬರೂ ಪ್ರೇಮಿಗಳು ತಮ್ಮನ್ನು ಒಂದು ಮಾಡುವಂತೆ ಪೊಲೀಸರ ಮೊರೆ ಹೋಗಿದ್ದರು.
ಪೊಲೀಸರು ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಬೇರೆ ಬೇರೆ ಮಾಡಲು ಮುಂದಾದ ವೇಳೆ ಬಜರಂಗದಳ ಕಾರ್ಯಕರ್ತರು ಒಂದು ಪ್ರೇಮಿಗಳನ್ನು ಒಂದು ಮಾಡಬೇಕೆಂದು ಪಟ್ಟು ಹಿಡಿದು ಮದುವೆ ಮಾಡಿಸಿದ್ದಾರೆ.