ಬೆಂಗಳೂರು: ಯುವತಿಯೊಬ್ಬಳು ಕಂಠಪೂರ್ತಿ ಕುಡಿದು ಕಾರು ಚಲಾಯಿಸಿ ರಂಪಾಟ ನಡೆಸಿರುವ ಘಟನೆ ಇಲ್ಲಿಯ ಸದಾಶಿವನಗರ ರಸ್ತೆಯಲ್ಲಿ ನಡೆದಿದೆ.
ಯುವತಿ ಅಡ್ಡಾದಿಡ್ಡಿ ಕಾರು ಚಲಾಯಿಸಿರುವುದನ್ನು ಪ್ರಶ್ನಿಸಿದ್ದಕ್ಕೆ ಆಟೋ ಚಾಲಕನ ಮೈ ಕೈ ಪರಚಿ ಗಾಯಪಡಿಸಿದ್ದಾಳೆ.
ಆಟೋ ಚಾಲಕ ನಿಶಾಂತ್ ಎಂಬ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆಸಿದ್ದಾಳೆ. ಯುವತಿ ಹಾಗೂ ಯುವತಿ ಜೊತೆಯಿದ್ದ ಯುವಕ ಇಬ್ಬರೂ ಆಟೋ ಚಾಲಕನ ಜೊತೆ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.