Bangalore | ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ ಮಗ..!
ಮಾತುಬಾರದ ಮಗನನ್ನು ಹುಡುಕಿ ಕೊಟ್ಟ ಆಧಾರ್ ಕಾರ್ಡ್..!
ಯಲಹಂಕದ ಸಂತೆಯಲ್ಲಿ ಮಗನ ಕಳೆದುಕೊಂಡಿದ್ದ ಪಾರ್ವತಮ್ಮ
2016ರಲ್ಲಿ ಯಲಹಂಕ ಸಂತೆಯಲ್ಲಿ ಪಾರ್ವತಮ್ಮ ಮಗ ಭರತ್ ನಾಪತ್ತೆ
ಅಮ್ಮ-ಮಗನ ಒಂದು ಮಾಡಿದ ಅಧಿಕಾರಿಗಳಿಗೆ ಸಾರ್ವಜನಿಕರ ಸಲಾಂ
ಬೆಂಗಳೂರು : ಆರು ವರ್ಷಗಳ ಹಿಂದೆ ಸಂತೆಯಲ್ಲಿ ಕಳೆದು ಹೋಗಿದ್ದ ಮಾತುಬಾರದ ಮಗನನ್ನು ಆಧಾರ್ ಕಾರ್ಡ್ ಹುಡುಕಿ ಕೊಟ್ಟಿರುವ ಹೃದಯಸ್ಪರ್ಶಿ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
2016ರಲ್ಲಿ ಯಲಹಂಕದ ಸಂತೆಯಲ್ಲಿ ಪಾರ್ವತಮ್ಮ ಅವರು ತಮ್ಮ ಮಗ ಭರತ್ ನನ್ನು ಕಳೆದುಕೊಂಡಿದ್ದರು.
ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪಾರ್ವತಮ್ಮ ಕಿಡ್ನಾಪ್ ಕೇಸ್ ದಾಖಲಿಸಿದ್ದರು.
ಇತ್ತ ಭರತ್ ಮಹಾರಾಷ್ಟ್ರದ ನಾಗ್ಪುರ ರೈಲ್ವೆ ನಿಲ್ದಾಣ ಸೇರಿದ್ದು, ನಾಗ್ಪುರ ಪುನರ್ವಸತಿ ಕೇಂದ್ರಕ್ಕೆ ರೈಲ್ವೆ ಪೊಲೀಸ್ ಸೇರಿಸಿದ್ದರು.
ಈ ಸಂದರ್ಭದಲ್ಲಿ ಭರತ್ ಗೆ ಆಧಾರ್ ಕಾರ್ಡ್ ಮಾಡಿಸಲು ಶೆಲ್ಟರ್ ಅಧಿಕಾರಿ ಮಹೇಶ್ ಮುಂದಾಗಿದ್ದು, 2022ರ ಜನವರಿಯಲ್ಲಿ ಆಧಾರ್ ಸೇವಾ ಕೇಂದ್ರಕ್ಕೆ ಬೆರಳಚ್ಚು ರವಾನೆ ಮಾಡಲಾಗಿದೆ.
ಆಗ ಬೆಂಗಳೂರಲ್ಲಿ ಭರತ್ ಕಾರ್ಡ್ ಇರುವುದು ಸೇವಾ ಕೇಂದ್ರದಲ್ಲಿ ಪತ್ತೆಯಾಗಿದೆ. ಕೂಡಲೇ ಭರತ್ ಪೋಷಕರ ಪತ್ತೆಗೆ ಶೆಲ್ಟರ್ ಅಧಿಕಾರಿ ಮಹೇಶ್ ವಿನಂತಿಸಿದ್ದಾರೆ.
ಇತ್ತ ಭರತ್ ತಾಯಿ ನಂಬರ್ ಪತ್ತೆ ಮಾಡಿ ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಪುನರ್ವಸತಿ ಕೇಂದ್ರದ ಸಿಬ್ಬಂದಿ ಯಲಹಂಕ ಪೊಲೀಸರ ಸಂಪರ್ಕಸಿದ್ದರು.
ಯಲಹಂಕ ಇನ್ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಭರತ್ ತಾಯಿ ಪತ್ತೆಹಚ್ಚಿದ್ದರು, ಮಾರ್ಚ್ 7ರಂದು ನಾಗ್ಪುರಕ್ಕೆ ಪಾರ್ವತಮ್ಮರನ್ನು ಇನ್ಸ್ಪೆಕ್ಟರ್ ಕಳಿಸಿದ್ದಾರೆ. ಈ ಮೂಲಕ 6 ವರ್ಷಗಳ ಬಳಿಕ ತಾಯಿ ಮಗ ಒಂದಾಗಿದ್ದಾರೆ.
Aadhaar reunites Bengaluru boy with mom 6 years after he went missing









