ನವದೆಹಲಿ: ಆಮ್ ಆದ್ಮಿ ಪಕ್ಷದ ಸಚಿವ ಯುವತಿಗೆ ವಿಡಿಯೋ ಕಾಲ್ ನಲ್ಲಿ ಖಾಸಗಿ ಅಂಗ ತೋರಿಸಿದ್ದಾರೆಂಬ ಆರೋಪವೊಂದು ಕೇಳಿ ಬಂದಿದೆ.
ಸಚಿವ ಬಾಲ್ಕರ್ ಸಿಂಗ್ (Balkar Singh) 21 ವರ್ಷದ ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಈ ಆರೋಪ ಮಾಡಿದ್ದಾರೆ.
ವಿಡಿಯೋ ಕರೆಯಲ್ಲಿ ಬಾಲ್ಕರ್ ಸಿಂಗ್ ಮಹಿಳೆಯ ಬಳಿ ಬಟ್ಟೆ ಬಿಚ್ಚಲು ಒತ್ತಾಯಿಸಿದ್ದಾರೆ. ಅಲ್ಲದೆ, ಆಕೆಗೆ ತಮ್ಮ ಖಾಸಗಿ ಅಂಗಗಳನ್ನು ತೋರಿಸಿದ್ದಾರೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಿ ವರದಿ ನೀಡಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಪೊಲೀಸರಿಗೆ ಸೂಚಿಸಿದೆ.
ಆದರೆ, ಈ ಆರೋಪಗಳಿಗೆ ಸಚಿವ ಬಾಲ್ಕರ್ ಸಿಂಗ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ಕುರಿತು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.