ADVERTISEMENT
Wednesday, September 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕನ್ನಡಿ ಒರೆಸುವುದರಲ್ಲಿ ಜೀವನ ಕಳೆದೆ.. ಧೂಳು ನನ್ನ ಮುಖದ ಮೇಲೆಯೇ ಇತ್ತು…

Shwetha by Shwetha
December 28, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Aaruva deepakke bembalada belaku 2
Share on FacebookShare on TwitterShare on WhatsappShare on Telegram

ಕನ್ನಡಿ ಒರೆಸುವುದರಲ್ಲಿ ಜೀವನ ಕಳೆದೆ.. ಧೂಳು ನನ್ನ ಮುಖದ ಮೇಲೆಯೇ ಇತ್ತು… Aaruva deepakke bembalada belaku2

ಕಾರ್ಮೋಡ ಕರಗಿ ಭುವಿಯಲ್ಲಿ ಇಳೆ ನರ್ತಿಸುತ್ತಿತ್ತು. ಗುಡುಗು ಮಿಂಚಿನ ಆರ್ಭಟಕ್ಕೆ ಮರಗಿಡಗಳು ಭಯದಲ್ಲಿ ನಿಂತಲ್ಲೇ ಓಡಲು ಪ್ರಯತ್ನಿಸುತ್ತಲೇ ಇದ್ದವು.ತರಗೆಲೆಗಳು,ಕಸಕಡ್ಡಿಗಳು ಗಾಳಿಯ ಮೋಹಕ್ಕೆ ಸಿಲುಕಿ ಅದರೊಂದಿಗೆ ಹೆಜ್ಜೆ ಹಾಕಿದ್ದವು…

Related posts

r-ashoka-congress-hindus-ganeshotsava-maddur

ಹಿಂದೂಗಳಿಗೆ ಬೆದರಿಕೆ ಹಾಕುವ ಕಾಂಗ್ರೆಸ್‌, ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

September 16, 2026
tirupati-temple-reliance-foundation-25-electric-buses

ತಿರುಪತಿ ದೇವಸ್ಥಾನಕ್ಕೆ ರಿಲಯನ್ಸ್ ಫೌಂಡೇಶನ್‌ನಿಂದ 25 ಎಲೆಕ್ಟ್ರಿಕ್ ಬಸ್‌ಗಳ ಕೊಡುಗೆ

September 16, 2026

ಹೌದು.. ಅದೊಂದು ಸಂಜೆ ನಾನು ಕಾನನ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮೂರಿನ ಆದರ್ಶ ವ್ಯಕ್ತಿ ಸೀತಾರಾಮ ಹೆಬ್ಬಾರ್ ಅವರೊಂದಿಗೆ ಮನೆಯತ್ತ ಧಾವಿಸುತ್ತಿದ್ದೆ. ಜೋರಾಗಿ ಸುರಿವ ಮಳೆಗೆ ನಾನು ಛತ್ರಿ ತಂದಿಲ್ಲ ಎಂಬುದು ಹೇಗೆ ಅರಿವಾಗುವುದು..? .. Aaruva deepakke bembalada belaku2

Aaruva deepakke bembalada belaku 2
ಉಪಾಯವಿಲ್ಲದೆ ಬೈಕ್ ನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಕಾಪೋಳಿಯ ಪುಟ್ಟ ಬಸ್ಸ್ಟ್ಯಾಂಡ್ ಗೆ ಹೆಜ್ಜೆ ಇಟ್ಟೆವು… ಕೈಯಲ್ಲಿದ್ದ ಪ್ರಮಾಣಪತ್ರ ಪುಸ್ತಕಗಳು ಮಳೆಹನಿ ಅಂಟಿದ ನೋವಿಗೆ ಅಳುತ್ತಿದ್ದವು. ಇನ್ನೇನು ಕತ್ತಲೆಯಾಗುತ್ತಿದೆ ಮನೆಗೆ ಹೋಗುವುದಾದರೂ ಹೇಗೆ ಈ ಮಳೆಗೆ… ದೇವರೇ ಒಮ್ಮೆ ಮಳೆಯನ್ನ ನಿಲ್ಲಿಸು.. ಎಂದು ಮನದಲ್ಲೇ ನೂರು ಬಾರಿ ಪ್ರಾರ್ಥಿಸುತ್ತಿದ್ದೆ. ಯಾವುದಾದರು ವಾಹನ ನಿಲ್ಲಿಸಿ ಹೋಗೋಣ ಎಂದರೂ ಒಂದೇ ಒಂದು ವಾಹನದ ಸುಳಿವಿಲ್ಲ. ದಿಕ್ಕೇ ತೋಚದೆ ಕೈ ಕಟ್ಟಿ ಬಸ್ಸ್ಟ್ಯಾಂಡ್ ಮೂಲೆಯಲ್ಲಿ ಮಂಕಾಗಿ ನಿಂತಿದ್ದೆ.
ನನ್ನೊಂದಿಗಿದ್ದಿದ್ದು ಸಾಮಾನ್ಯ ವ್ಯಕ್ತಿಯಲ್ಲ. ಜ್ಞಾನದಲ್ಲಿ ವಿಚಾರವಂತ, ಭಾಗವತಿಕೆಯಲ್ಲಿ ಪ್ರವೀಣ, ಮಾತಿನಲ್ಲಿ ಅರಸ , ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್.. ಅವರ ಜೀವನ ಅನುಭವಗಳನ್ನು ಹೇಳುತ್ತಾ ನನ್ನೊಳಗಿನ ನನ್ನನ್ನು ತೆರೆದಿಡಲು ವ್ಯಕ್ತಿತ್ವದ ಅರಿವನ್ನು ಮಾತಿನಲ್ಲಿ ಪಸರಿಸುತ್ತಿದ್ದರು.. ಅವರ ಮಾತುಗಳನ್ನು ಶಿಷ್ಯೆಯಂತೆ ಆಲಿಸುತ್ತಿದ್ದರೂ ಗುಡುಗಿನ ಶಬ್ದವನ್ನು ಕೇಳಲಾಗದೆ ಕಿವಿ ಮುಚ್ಚಿಕೊಂಡೆ..
ಅಯ್ಯೋ…ಸ್ವಲ್ಪ ಹೊತ್ತು ಬಿಟ್ಟು ಮಳೆ ಬಂದಿದ್ದರು ಪರಿವಾಗಿರ್ಲಿಲ್ಲ.. ಮನೆಗೆ ತಲುಪುತ್ತಿದ್ದೆವು.. ಮಳೆಗೂ ಹೊಟ್ಟೆಕಿಚ್ಚೆ ಇರಬೇಕು ಎಂದೆಲ್ಲಾ ಮನದಲ್ಲೇ ಬೈಯುತಿದ್ದೆ.
ಅಷ್ಟರಲ್ಲಿ ನಮ್ಮೂರಿನ ಇಬ್ಬರು ಮಳೆಯಲ್ಲಿ ಒದ್ದೆಯಾಗುತ್ತಾ ಬಸ್ಸ್ಟ್ಯಾಂಡ್ ಒಳಗೆ ಹೆಜ್ಜೆ ಇಟ್ಟರು. ಹಿರಿಯರಿಗೆ ನಮಸ್ಕರಿಸುತ್ತಾ ಮಾತಿನ ಕಟ್ಟೆಯಲ್ಲಿ ಕುಳಿತರು. ಗಾಳಿಯ ರಭಸಕ್ಕೆ ಬಸ್ಸ್ಟ್ಯಾಂಡ್ ಕೊಟ್ಟಿಗೆ ಯಂತೆ ಕಂಗೊಳಿಸುತ್ತಿತ್ತು. ತರಗೆಲೆಗಳ ರಾಶಿ ನೆಲದ ಮೇಲೆ ಹರಡಿ ಅಲಂಕಾರ ಮಾಡಿತ್ತು. ಧೂಳು, ಕೆಸರು ಮಣ್ಣು ಕುಳಿತವರ ಪಂಚೆ ಮೇಲೆ ಅಂಟಿ ಪಂಚೆಯ ಬಣ್ಣವನ್ನು ಬದಲಿಸಿತ್ತು. ಇವೆಲ್ಲವನ್ನೂ ಗಮನಿಸಿದರೂ ಮೂಕಳಾಗಿ ನಿಂತ ನನಗೆ ವ್ಯಕ್ತಿತ್ವದ ಪಾಠ ಕಲಿಸಿದ್ದು.. ನನ್ನ ಗುರುಗಳೇ.. ಹೌದು….
ನಾನು ಕುಳಿತವರನ್ನು ಎಬ್ಬಿಸಿ, ಅಲ್ಲಿ ಧೂಳಿದೆ ಎದ್ದೇಳಿ ಎಂದೆ. ಕುಳಿತವರು ಮಣ್ಣಿನೊಂದಿಗೆ ಭಾಂದವ್ಯವ ಬೆಸೆದ ಕಾರ್ಮಿಕರು. ಅವರಿಗೇನೂ ಧೂಳು ಹಿಡಿದಿದ್ದು ಹಿಂಸೆ ಅನ್ನಿಸಲೇ ಇಲ್ಲ.. ಇರ್ಲಿ ಬಿಡಮ್ಮ… ಎಂದು ಮತ್ತೆ ಅಲ್ಲೇ ಕುಳಿತರು.
ಅಷ್ಟರಲ್ಲಿ ಒಂದು ಕ್ಷಣವೂ ಯೋಚಿಸದೆ ಸೀತಾರಾಮ ಹೆಬ್ಬಾರ್ ಅವರು ತನ್ನ ಕೈಯಲ್ಲೇ ನೆಲದ ಮೇಲೆ ಹರಡಿದ್ದ ತರಗೆಲೆ, ಕಸಕಡ್ಡಿಗಳನ್ನು ಸರಿಸತೊಡಗಿದರು..ಇಡೀ ಬಸ್ಸ್ಟ್ಯಾಂಡ್ ನ್ನು ಅಂತಹ ಸಾಧಕ ತನ್ನ ಬೆರಳುಗಳನ್ನೇ ಬಳಸಿ ಶುಭ್ರಗೊಳಿಸಿದ್ದು ಅಚ್ಚರಿಯಾಗಿ ಕಂಡರೂ ನಾನು, ಮತ್ತಿಬ್ಬರು ಅವರ ಕೆಲಸವನ್ನು ಕಣ್ಣು ಮಿಟಿಕಿಸುತ್ತ ನೋಡುತಿದ್ದೆವಷ್ಟೆ.. ಅಷ್ಟರಲ್ಲಿ ಓರ್ವ ” ಇರ್ಲಿ ಸರ್, ನೀವ್ಯಾಕೆ ಸ್ವಚ್ಛ ಮಾಡ್ತೀರಿ. ದಿನಾ ಹೀಗೆಯೇ ಇರುತ್ತೆ ” ಎಂದರು. ಹೆಬ್ಬಾರರು ಮುಗುಳ್ನಗುತ್ತ ಏನನ್ನೂ ಉತ್ತರಿಸದೆ ತನ್ನ ವಸ್ತ್ರವನ್ನು ಒದ್ದೆ ಮಾಡಿ ಇಡೀ ಬಸ್ಸ್ಟ್ಯಾಂಡ್ ನ್ನು ಎರಡು ಮೂರು ಬಾರಿ ಒರೆಸಿ ಕೊಟ್ಟಿಗೆಯಂತಿದ್ದ ಬಸ್ಸ್ಟ್ಯಾಂಡ್ ನ್ನು ಗುಡಿಯಂತೆ ಬೆಳಗಿಸಿದರು. ಆಗಲೇ ನನಗೆ ಅರಿವಾಗಿದ್ದು.. ” ಕನ್ನಡಿ ಒರೆಸುವುದರಲ್ಲಿ ಜೀವನ ಕಳೆದೆ, ಧೂಳು ನನ್ನ ಮುಖದ ಮೇಲೆಯೇ ಇತ್ತು ” ಎಂದು.
Aaruva deepakke bembalada belaku 2
ಇದರರ್ಥ. ಹಿಡಿವ ಧೂಳಿನಿಂದ ಪಾರಾಗಲು ಹೇಳಿದ ನನಗೆ ಧೂಳೇ ಹಿಡಿಯದೇ ಕುಳಿತುಕೊಳ್ಳುವಂತೆ ಮಾಡುವ ಸಾಮರ್ಥ್ಯ ಇದ್ದರೂ ಮೌನಿಯಾಗಿ ನಿಂತಿದ್ದ ನನಗೆ ಸ್ವಚ್ಛತೆಯ ಅರಿವು ಮೂಡಿಸಿ ವ್ಯಕ್ತಿತ್ವ ಪಾಠವನ್ನು ಕಲಿಸಿದ ಗುರು ಸೀತಾರಾಮ ಹೆಬ್ಬಾರ್..
ನಿಮಗೆಲ್ಲ ಸಣ್ಣ ವಿಚಾರವಾಗಿ ಕಂಡರೂ ನನಗದು ತಾಯಿಯ ಗರ್ಭದಿ ಬೆಳೆದು ಈ ಲೋಕಕ್ಕೆ ಕಾಲಿಟ್ಟ ಗಳಿಗೆಯಷ್ಟೇ ಹಿರಿದು.
ನಿಮಗೂ ಈ ಘಟನೆ ಒಂದು ಸುಂದರ ಸಂದೇಶ ನೀಡಿದೆ..
ಬದುಕಿನಲ್ಲಿ ಯಶಸ್ಸು, ಕೀರ್ತಿ,ಗೌರವ ಎಲ್ಲಾ ಗಳಿಸಿದರೂ ನೀವು ಶ್ರೇಷ್ಟರಾಗುವುದು ನಿಮ್ಮ ಸುಂದರ ವ್ಯಕ್ತಿತ್ವದಿಂದಲೇ. ಹಣ, ಹೆಸರು ದೊಡ್ಡದಲ್ಲ… ಬಡವರ್ಗದ ಹೆಣ್ಣೊಬ್ಬಳು ತನ್ನೆದುರಿಗೆ ಕೀರ್ತಿ ಪಡೆದರೆ ಗುರುವೇ ಹೊಟ್ಟೆಕಿಚ್ಚು ಪಡುತ್ತಾ ಶಿಷ್ಯೆಯ ದೂರುವ ಕಾಲವಿದು. ಅಂತದ್ದರಲ್ಲಿ ಈ ಒಂದು ದೃಶ್ಯ ನನಗೆ ಹೃದಯ ಮುಟ್ಟಿತು.

ಮನುಷ್ಯನಲ್ಲಿ ನರಿಯ ಕುತಂತ್ರ, ಮಂಗನ ಚೇಷ್ಟೆ ಬೆರೆತು ಹೋಗಿದೆ. ನಮ್ಮ ಪ್ರಕಾರ ನಾವೇ ಸರಿ. ಪ್ರತಿ ತಪ್ಪುಗಳಿಗೂ ಇನ್ನೊಬ್ಬರನ್ನು ದೂರಲು ನಮ್ಮ ಬೆರಳು ಸಿದ್ದ.ಆದರೆ ಉಳಿದ ಬೆರಳುಗಳು ನಮ್ಮನ್ನೇ ತೋರಿಸುತ್ತವೆ ಎಂಬುದು ತಿಳಿದೇ ಇಲ್ಲ.

Aaruva deepakke bembalada belaku 2

ನಮಗೆ ಇತರರ ಬಗ್ಗೆ ಒಂದು ಭಾವ ಮೂಡಬೇಕಾದರೆ ಅಥವಾ ಇನ್ನೊಬ್ಬರನ್ನು ದೂಷಿಸಿದರೆ ಆ “ದೂಷಿಸುವ ಗುಣ ” ವೂ ನನ್ನೊಳಿಗಿನ ನನ್ನಲ್ಲೇ ಹುಟ್ಟಿರುತ್ತದೆ..ಅಲ್ವಾ..
ಸದಾ ಈ ಸಮಾಜಕ್ಕೆ ದಾರಿದೀಪವಾಗುವ ವಿಚಾರಗಳನ್ನೇ ಚಿಂತಿಸೋಣ…. ನಾಲ್ಕು ದಿನದ ಜೀವನದಲ್ಲಿ ಕಾಮ, ಕ್ರೋದ, ಮದ, ಮತ್ಸರಗಳಲ್ಲೇ ಜೀವನ ವ್ಯರ್ಥ ಮಾಡುವ ಜನರೊಮ್ಮೆ ಹಿಂತಿರುಗಿ ನೋಡಿ…ಗಳಿಸಬೇಕಾಗಿದ್ದು, ಮಾಡುವ ಕೆಲಸ, ಕಲಿಯುವ ಪಾಠ ಸಾಗರದಷ್ಟಿದೆ…. ಸಜ್ಜನರಾಗಿ ಹೆಜ್ಜೆ ಇಡಿ. ಬಡವ ಬಲ್ಲಿದ ನನ್ನು ಸಮನಾಗಿ ಗೌರವಿಸಿ… ನೆನಪಿಡಿ. ನಿಮ್ಮ ವ್ಯಕ್ತಿತ್ವವೇ ನಿಮ್ಮ ಕೈಗನ್ನಡಿ.
ಕನ್ನಡಿಯ ಧೂಳ ಒರೆಸುವ ಮೊದಲು ಮುಖದ ಮೇಲಿನ ಧೂಳನ್ನು ಒರೆಸಿಕೊಳ್ಳಿ…

ಇಂತಿ ನಿಮ್ಮ ಪ್ರೀತಿಯ..

ಚೈತ್ರ ಕಬ್ಬಿನಾಲೆ ✍️✍️✍️

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹೆಬ್ರಿ ಘಟಕದ ಸಂಚಾಲಕಿ

ಸಾಕ್ಷಾ ಟಿವಿಯ ಆರುವ ದೀಪಕ್ಕೆ ಬೆಂಬಲದ ಬೆಳಕು – ಅಂಕಣಕಾರರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Aaruva deepakke bembalada belakuSaakshatv Aaruva deepakke bembalada belakuಆರುವ ದೀಪಕ್ಕೆ ಬೆಂಬಲದ ಬೆಳಕುಚೈತ್ರ ಕಬ್ಬಿನಾಲೆ
ShareTweetSendShare
Join us on:

Related Posts

r-ashoka-congress-hindus-ganeshotsava-maddur

ಹಿಂದೂಗಳಿಗೆ ಬೆದರಿಕೆ ಹಾಕುವ ಕಾಂಗ್ರೆಸ್‌, ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
September 16, 2026
0

ಹಿಂದೂಗಳಿಗೆ ಬೆದರಿಕೆ ಹಾಕುವ ಕಾಂಗ್ರೆಸ್‌, ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಬೆಂಗಳೂರು/ಮದ್ದೂರು : ಕಾಂಗ್ರೆಸ್‌ ಸರ್ಕಾರ ಹಿಂದೂಗಳ ಗಣೇಶೋತ್ಸವಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು....

tirupati-temple-reliance-foundation-25-electric-buses

ತಿರುಪತಿ ದೇವಸ್ಥಾನಕ್ಕೆ ರಿಲಯನ್ಸ್ ಫೌಂಡೇಶನ್‌ನಿಂದ 25 ಎಲೆಕ್ಟ್ರಿಕ್ ಬಸ್‌ಗಳ ಕೊಡುಗೆ

by admin
September 16, 2026
0

ತಿರುಮಲ, : ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಹಸಿರು ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್...

ಬಿಡದಿ ಟೌನ್ ಶಿಪ್ ಕಿಚ್ಚು- ಕೇಂದ್ರ ಸಚಿವರಾಗಿ ಚಿಲ್ಲರೆ ರಾಜಕಾರಣ ಮಾಡ್ತೀರಾ: ಕ್ಷುಲ್ಲಕ ಹೇಳಿಕೆ ಕೊಡಲು ನಾಚಿಕೆಯಾಗಲ್ವಾ; ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಗುಡುಗು

ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಲಿ ಎನ್ನುವುದು ಹೆಚ್ ಡಿ ಕುಮಾರಸ್ವಾಮಿ ಆಸೆ: ಕೇಂದ್ರ ಮಂತ್ರಿಯೋ ಅಥವಾ ಪಂಚಾಯ್ತಿ ಮೆಂಬರೋ? ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಕೆಂಡಾಮಂಡಲ

by Shwetha
September 16, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಈಗ ಮತ್ತೊಂದು ಸ್ಫೋಟಕ ಹಂತಕ್ಕೆ ತಲುಪಿದೆ. ಪ್ರಜ್ವಲ್ ರೇವಣ್ಣ...

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

by Shwetha
September 16, 2026
0

ರಾಜ್ಯದ ಬಡ ಮತ್ತು ಅಗತ್ಯವಿರುವ ಜನರಿಗೆ ಆಹಾರ ಭದ್ರತೆ ಒದಗಿಸುವ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಯಲ್ಲಿ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ...

ಐಎಎಸ್ ಅಧಿಕಾರಿಗಳ ಜತೆ ಜುಗಲ್ಬಂದಿ ಆಡಿದ್ದ  ಕನ್ನಾಳೆ ಅಕ್ರಮಗಳ ಪಟ್ಟಿ ನೋಡಿ ಬೆಚ್ಚಿಬಿದ್ದ ತನಿಖಾಧಿಕಾರಿಗಳು:ಶೂನ್ಯದಿಂದ ನೂರಾರು ಕೋಟಿ ಒಡೆಯನಾದ ಅಕ್ರಮ ದಲ್ಲಾಳಿಯ ಆಟಕ್ಕೆ ಬ್ರೇಕ್ ಹಾಕಿದ ಸಿಐಡಿ.

ಐಎಎಸ್ ಅಧಿಕಾರಿಗಳ ಜತೆ ಜುಗಲ್ಬಂದಿ ಆಡಿದ್ದ ಕನ್ನಾಳೆ ಅಕ್ರಮಗಳ ಪಟ್ಟಿ ನೋಡಿ ಬೆಚ್ಚಿಬಿದ್ದ ತನಿಖಾಧಿಕಾರಿಗಳು:ಶೂನ್ಯದಿಂದ ನೂರಾರು ಕೋಟಿ ಒಡೆಯನಾದ ಅಕ್ರಮ ದಲ್ಲಾಳಿಯ ಆಟಕ್ಕೆ ಬ್ರೇಕ್ ಹಾಕಿದ ಸಿಐಡಿ.

by Shwetha
September 16, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣ ಇಡೀ ರಾಜ್ಯವನ್ನೇ ನಡುಗಿಸಿದೆ. ಈ ಹಗರಣದ ರೂವಾರಿ, ವಿಧಾನಸೌಧದ ಕಾರಿಡಾರ್‌ಗಳಲ್ಲಿ ದರ್ಬಾರ್ ನಡೆಸುತ್ತಿದ್ದ ಬಸವರಾಜ್ ಕನ್ನಾಳೆ ಎಂಬ ಸಾಮಾನ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram