ಅಂಬಿ ಹುಟ್ಟು ಹಬ್ಬದಂದು ಅಭಿಷೇಕ್ ನಟನೆಯ 2 ಚಿತ್ರಗಳ ಫಸ್ಟ್ ಲುಕ್ ರಿಲೀಸ್
ಮಂಡ್ಯದ ಗಂಡು ಅಂಬರೀಶ್ ಅವರ ಹುಟ್ಟು ಹಬ್ಬದ ದಿನದಂದು ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟನೆಯ ಎರಡು ಸಿನಿಮಾಗಳ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಒಂದು ಗಜಕೇಸರಿ, ಪೈಲ್ವಾನ್ ಸಿನಿಮಾ ಖ್ಯಾತಿಯ ಕೃಷ್ಣ ನಿರ್ದೇಶನ ಮಾಡುತ್ತಿದ್ದರೆ, ಮತ್ತೊಂದು ಸಿನಿಮಾವನ್ನು ಅಯೋಗ್ಯ ಚಿತ್ರ ಖ್ಯಾತಿಯ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಫೈಲ್ವಾನ್ ಕೃಷ್ಣ ನಿರ್ದೇಶನದ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ ಇದು ಅಭಿಷೇಕ್ ಅಭಿನಯದ ಮೂರನೇ ಚಿತ್ರ, ಮಹೇಶ್ ನಿರ್ದೇಶನದ ಇನ್ನೊಂದು ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ AA4 ಎಂದಷ್ಟೆ ಸದ್ಯಕ್ಕೆ ಕರೆಯಲಾಗುತ್ತಿದೆ.

ಚಿತ್ರದ ಫಸ್ಟ್ ಲುಕ್ ಮಾತ್ರ ಬಿಡುಗಡೆಗೊಂಡಿದೆ ಇನ್ನುಳಿದೆ ದಂತೆ ಚಿತ್ರದ ಪಾತ್ರವರ್ಗ ನಾಯಕಿ ಈ ಕುರಿತು ಇನ್ನೂ ಯಾವುದೇ ಮಾಹಿತಿಗಳು ಹೊರಬಂದಿಲ್ಲ.
ಪುತ್ರನ ಕಾಳಿ ಚಿತ್ರದ ಬಗ್ಗೆ ಸುಮಲತಾ ಅಂಬರೀಷ್ ಟ್ವೀಟ್ ಮಾಡಿ ಹಾರೈಸಿದ್ದಾರೆ. ನಮ್ಮ ಜೂನಿಯರ್ ರೆಬಲ್ ಅಭಿಷೇಕ್ ಅಂಬರೀಷ್ ನಟನೆಯ “ಕಾಳಿ” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಎಲ್ಲರೂ ನೋಡಿ ಹರಸಿ ಆಶೀರ್ವಾದಿಸಿ. ಎಂದಿನಂತೆ ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ, ಸಹಕಾರ ಇರಲಿ. ಎಂದಿದ್ದಾರೆ. ಇನ್ನು ಕಿಚ್ಚ ಸುದೀಪ್ ಸಹ ಕಾಳಿ ಚಿತ್ರದ ಕುರಿತು ಟ್ವೀಟ್ ಮಾಡಿ ಅಭೀಷೇಕ್ ಮತ್ತು ಕೃಷ್ಣ ಅವರಿಗೆ ಶುಭಕೋರಿದ್ದಾರೆ.








