accident- ಇಂದು ಬೆಳ್ಳಂಬೆಳಗ್ಗೆ ಉತ್ತರ ಪ್ರದೇಶದ ಬಹ್ರೈಚ್ನ ಹೆದ್ದಾರಿಯಲ್ಲಿ ಬಸ್ ಮತ್ತು ಟ್ರಕ್ ಡಿಕ್ಕಿ ಹೊಡೆದು ಭಿಕರ ಅಪಘಾತ ಸಂಭಂವಿಸಿ ಈ ಅಪಘಾತದಲ್ಲಿ 6 ಜನ ಸ್ಥಳದಲ್ಲೆ ಸಾವನ್ನಪ್ಪಿದ್ದು 15 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅಪಘಾತದ ಗಾಯಾಳುಗಳನ್ನು ಲಕ್ನೋ ಟ್ರಾಮಾ ಸೆಂಟರ್ಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಈ ಅಪಘಾತವು ಇಂದು ಬೆಳ್ಳಿಗೆ 4.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಮಂಜಿನಿಂದಾಗಿ ವೇಗವಾಗಿ ಬಂದ ಟ್ರಕ್ ಲಕ್ನೋ ಈದ್ಗಾ ಡಿಪೋದ ಬಳಿ ಬಸ್ಗೆ ಡಿಕ್ಕಿ ಹೊಡೆದಿದೆ. ಜರ್ವಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಘರ್ಘರಾ ಘಾಟ್ ಬಳಿ ಈ ಅಪಘಾತ ನಡೆದಿದೆ . ಮಂಜು ಮುಸುಕಿದ ಕಾರಣದಿಂದ ರಸ್ತೆ ಕಾಣದೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಲಕ್ನೋದಿಂದ ಬಹ್ರೈಚ್ಗೆ ಬಸ್ ಗೆ ಹೋಗುತ್ತಿತ್ತು. ಅಪಘಾತದ ವಿಷಯತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು , ಅಪಘಾತ ನಡೆಸಿದ ಟ್ರಕ್ ನ ಹುಡುಕಾಟ ನಡೆಸಿದ ಪೊಲೀಸರು ಹತ್ತಿರದ ಡಾಬಾಗಳ ಸಿಸಿಟಿವಿ ಪರಿಶೀಲನೆ ನಡೆಸಿದರು . ಟ್ರಕ್ನೊಂದಿಗೆ ಚಾಲಕ ಪರಾರಿಯಾಗಿದ್ದು, ಅವನನು ಹುಡುಕುವ ಕಾರ್ಯ ಮುಂದುವರೆದಿದೆ.