Bengaluru : ರಸ್ತೆ ಅಪಘಾತದಲ್ಲಿ 22 ವರ್ಷದ ಡೆಂಟಲ್ ವಿದ್ಯಾರ್ಥಿ ಸಾವು
ರಸ್ತೆ ಅಪಘಾತದಲ್ಲಿ 22 ವರ್ಷದ ಡೆಂಟಲ್ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ಬೆಂಗಳೂರಿನ ಯಶವಂತಪುರದ ಬಿಹೆಚ್ ಎಲ್ ಬಳಿ ನಡೆದಿದೆ.. ಮತ್ತಿನ್ (22) ಮೃತ ಡೆಂಟಲ್ ವಿದ್ಯಾರ್ಥಿಯಾಗಿದ್ದಾನೆ.. ಬೈಕ್ ನಲ್ಲಿ ತೆರಳುತ್ತಿದ್ದಾಗ ಖಾಸಗಿ ಟೋಯಿಂಗ್ ವಾಹನಕ್ಕೆ ಡಿಕ್ಕಿ ಹಹೊಡೆದ ಪರಿಣಾಮ ಅನಾಹುತ ಸಂಭವಿಸಿದೆ..
ಹೆಲ್ಮೆಟ್ ಧರಿಸದೆ ಇದ್ದಿದ್ದರಿಂದ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತಿನ್ ನನ್ನ ತಕ್ಷಣವೇ ಖಾಸಗಿ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯ್ತಾದ್ರೂ ಯಶಸ್ವಿಯಾಗದೇ ಅಸುನೀಗಿದ್ದಾನೆ.. ಟೋಯಿಂಗ್ ಚಾಲಕನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.. ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..








