ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ನಡೆದಿದ್ದ ಜೋಡಿ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಸ್ ಸರ್ವಿಸ್ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಬಂಧಿತ ಆರೋಪಿ. ನಾಗೇಶ್ (55) ಮತ್ತು ಮಂಜುನಾಥ್ (50) ಎಂಬುವವರನ್ನು ಆರೋಪಿಯು ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದ ಎನ್ನಲಿಗದೆ. ಕುಡಿದ ನಶೆಯಲ್ಲಿ ಗಲಾಟೆ ಮಾಡಿಕೊಂಡು ರಾಡ್‌ನಿಂದ ತಲೆಗೆ ಹೊಡೆದು ಇಬ್ಬರ ಹತ್ಯೆ ಮಾಡಿದ್ದ. ನಾಗೇಶ್ ಮತ್ತು ಮಂಜುನಾಥ್ ಯಾವಾಗಲೂ ಸುರೇಶ್ ಗೆ ಬೈಯ್ಯುತ್ತಿದ್ದರು ಎನ್ನಲಾಗಿದೆ.
ಕೊಲೆಯಾದ ದಿನವೂ ನೀನು ಕಳ್ಳ. ನೀನ್ನ ಮೇಲೆ ಕೇಸ್ ಗಳಿವೆ ಎಂದು ನಿಂದಿಸಿದ್ದಕ್ಕೆ ಬೇಸತ್ತು ಇಬ್ಬರನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಮೂವರು ಬಸ್ ಸರ್ವಿಸ್ ಕೆಲಸ ಮಾಡಿಕೊಂಡಿದ್ದರು. ಬಾಗಲೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.








