ಬೆಂಗಳೂರು: ಸಚಿವರಿಗೆ ಕಪಾಳಕ್ಕೆ ಹೊಡೆದಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೆಲ್ಲಾ ಸುಳ್ಳು ಆರೋಪ. ಅವರಿಗೂ ಹಿಡಿದು ಯಾರೋ ಕಪಾಳಕ್ಕೆ ಹೊಡೆದರು ಎಂದು ನನಗೂ ಯಾರೋ ಹೇಳಿದರು. ಅದಕ್ಕೆ ಆದಾರ ಇದೆಯಾ? ಯಾರಿಗೋ ಮೋಸ ಮಾಡಿದ್ದಾರಂತೆ, ಅವರಿಗೂ ಕಪಾಳಕ್ಕೆ ಹೊಡೆದರಂತೆ ಎಂದು ನನಗೂ ಹೇಳಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕ ಸರ್ಕಾರ 700 ಕೋಟಿ ಸಂಗ್ರಹ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ರಾಜಕೀಯವಾದ ಆರೋಪ. ಆರೋಪ ಸಾಬೀತು ಪಡಿಸಿದರೆ ಸಣ್ಣ ಶಿಕ್ಷೆಗೂ ಗುರಿಯಾಗುತ್ತೇವೆ. ದೊಡ್ಡ ಹುದ್ದೆಯಲ್ಲಿರುವವರು ಆಧಾರ ಇಲ್ಲದೇ ಆರೋಪ ಮಾಡಬಾರದು ಎಂದು ಹೇಳಿದ್ದಾರೆ.








