Thursday, June 1, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Chanakya story : ಮಹಾನ್ ಬುದ್ಧಿವಂತ ನಂದ ವಂಶ ನಿರ್ಣಾಮ ಮಾಡಿದ ಆಚಾರ್ಯ ಚಾಣಕ್ಯರ ಜೀವನಕಥೆ..!

Namratha Rao by Namratha Rao
January 29, 2022
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

Chanakya story : ಮಹಾನ್ ಬುದ್ಧಿವಂತ ನಂದ ವಂಶ ನಿರ್ಣಾಮ ಮಾಡಿದ ಆಚಾರ್ಯ ಚಾಣಕ್ಯರ ಜೀವನಕಥೆ..!

ಮಹಾನ್ ಜ್ಞಾನ ಸಂಪಾದಿಸಿ ತಮ್ಮ ಹೆಸರು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯುವಂತೆ ಮಹಾನ್ ಕಾರ್ಯಗಳನ್ನ ಮಾಡಿರುವ ಜ್ಞಾನಿಗಳು, ಸಂತರು , ಮಹಾನ್ ವ್ಯಕ್ತಿಗಳು ಜನಿಸಿರುವ ದೇಶ ನಮ್ಮ ಹೆಮ್ಮಯ ಭಾರತ. ಬುದ್ದಿವಂತರು, ಮಹಾನ್ ಪಂಡಿತರು, ಜ್ಞಾನಿಗಳು ಅಂದ ಅಂದ ತಕ್ಷಣ ನಮ್ಮ ತಲೆಗೆ ಬರುವ ಮೊದಲ ಹೆಸರು ಆಚಾರ್ಯ ಚಾಣಕ್ಯರದ್ದು.

Related posts

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

May 1, 2023
ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

April 26, 2023

ಹೌದು ಚಾಣಕ್ಯನ ನೀತಿಗಳನ್ನ ಜನರು ಇಂದಿಗೂ ಅನುಸರಿಸುತ್ತಾರೆ. ಶಿಕ್ಷಕ, ಫಿಲಾಸಫರ್, ಅರ್ಥಶಾಸ್ತ್ರಜ್ಞ, ರಾಜ ಆಡಳಿತದ ಸಲಹೆಗಾರನಾಗಿದ್ದ ಚಾಣಕ್ಯ ಛಲಕ್ಕೆ, ಬುದ್ದಿವಂತಿಕೆಗೆ ಮಾದರಿ, ಸ್ಫೂರ್ತಿ. ಅಷ್ಟೇ ಅಲ್ಲ ಇವತ್ತಿಗೂ ಇಡೀ ವಿಶ್ವದಲ್ಲೇ ಮಹಾನ್ ರಾಜಕಾರಣಿ ಅಂತಲೂ ಚಾಣಕ್ಯರನ್ನೇ ಬಿಂಬಿಸಲಾಗುತ್ತದೆ. ತನ್ನ ನಿಪುಣತೆ, ರಾಜತಾಂತ್ರಿಕತೆ ಬುದ್ದಿವಂತಿಕೆ, ಛಲವಂತಿಕೆಯಿಂದ, ತನಗೆ ನಂದ ವಮಶದವರು ಮಾಡಿದ ಅಪಮಾನಕ್ಕೆ ಯಾವ ರೀತಿ ಚಾಣಕ್ಯ ಸೇಡು ತೀರಿಸಿಕೊಂಡಿದ್ದರು ಅನ್ನೋ ವಿಚಾರ ಅನೇಕರಿಗೆ ಗೊತ್ತೇ ಇರುತ್ತೆ.

ನಿಮಗೆ ಗೊತ್ತಿರಬಹುದು. ಇಲ್ಲ ಅನೇಕರು ಸಲಹೆ ನೀಡಿರಬಹುದು. ಇವತ್ತಿಗೂ ಜನರು ಸಫಲತೆಗೆಗಾಗಿ ಚಾಣಾಕ್ಯನ ಸೂತ್ರಗಳನ್ನ ಅನುಸರಿಸುತ್ತಾರೆ. ಅಂತ ಮಹಾನ್ ಜ್ಞಾನಿ ಆಚಾರ್ಯ ಚಾಣಾಕ್ಯನ ಲೈಫ್ ಹಿಸ್ಟರಿ ಹೇಗೆ ನಂದ ವಂಶ ನಿರ್ಣಾಮ ಮಾಡಿದರು ಅನ್ನೋದನ್ನ ಇವತ್ತು ತಿಳಿಯೋಣ. ಆದ್ರೆ ಚಾಣಕ್ಯನ ಬಗ್ಗೆ , ವಿವಿಧ ಪುಸ್ತಕಗಳು ಲೆಖನಗಳನ್ನ ಅನೇಕರು ರಚಿಸಿದ್ದಾರೆ. ಒಂದೊಂದರಲ್ಲೂ ಒಂದೊಂದು ವಿಭಿನ್ನತೆಗಳು ಇವೆ.chanakya - saakshatv

ಚಣಕ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ ಚಾಣಾಕ್ಯನ ಜನನವಾಗಿತ್ತು. ಚಾಣಾಕ್ಯನನ್ನ ಜನರು ವಿಷ್ಣುಗುಪ್ತ ಹಾಗೂ ಕೌಟಿಲ್ಯ ಎಂಬ ಹೆಸರುಗಳಿಂದಲೂ ಕರೆಯುತ್ತಿದ್ದರು. ಚಾಣಕ್ಯನ ಬಾಲ್ಯದಿಂದಲೇ ಅತ್ಯಂತ ಬುದ್ದಿವಂತರಾಗಿದ್ದರು ಎನ್ನಲಾಗಿದೆ. ಇದೇ ಬುದ್ದಿವಂತಿಯನ್ನ ಗಮನಿಸಿದ್ದ ಅವರ ತಂದೆ ಅದೇ ಊರಿನಲ್ಲಿ ತಕ್ಷಶಿಲಾ ಗುರುಕುಲಕ್ಕೆ ಚಾಣಾಕ್ಯರನ್ನ ಸೇರಿಸಿದ್ದರು. ಬಳಿಕ ವಿದ್ಯಾಭ್ಯಾಸ ಮುಗಿಸಿದ ಚಾಣಕ್ಯ ಅಲ್ಲೇ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು. ಚಾಣಕ್ಯರ ಸಮಯದಲ್ಲಿ ಪಾಟಲಿಪುತ್ರವೆಂಬ ಸ್ಥಳವಿತ್ತು. ಇದೇ ಪಾಟಲಿಪುತ್ರ ಇಂದು ಪಟ್ನಾವಾಗಿ ಗುರುತಿಸಿಕೊಂಡಿದೆ. ಈ ಪಾಟಲಿಪುತ್ರ ಆಗಿನ ಶಕ್ತಿಸಾಲಿ ಸಾಮ್ರಾಜ್ಯವಾಗಿದ್ದ ಮಗದ್ ನ ರಾಜದಾನಿಯಾಗಿತ್ತು. ಆಗ ಮಗದ್ ನಲ್ಲಿ ನಂದವಂಶದ ಆಳ್ವಿಕೆಯಿತ್ತು. ಅಲ್ಲಿನ ರಾಜ ಧನಾನಂದ್.chanakya - saakshatv

ಒಂದು ದಿನ ಧನಾನಂದ್ ಮಗದ್ ನಲ್ಲಿ ದೊಡ್ಡ ಹೋಮವನ್ನ ಆಯೋಜನೆ ಮಾಡಿದ್ದರು. ಈ ಯಜ್ಞ ನಡೆಯುವಾಗ ಚಾಣಕ್ಯ ಅಲ್ಲಿ ಉಪಸ್ಥಿತರಿದ್ದರು. ಬಳಿಕ ಬ್ರಹ್ಮ ಭೋಜನಕ್ಕೆ ತೆರಳಿದ್ದರು. ಈ ವೇಳೆ ಬ್ರಹ್ಮಭೋಜನದ ಸ್ಥಳಕ್ಕೆ ತೆರಳಿದ್ದ ರಾಜ ಧನಾನಂದ್ ಚಾಣಾಕ್ಯನ ವೇಷ ಭೂಷಣವನ್ನ ನೋಡಿ ತುಂಬಿದ ಭವನದಲ್ಲಿ ಲೇವಡಿ ಮಾಡಿ ಹಾಸ್ಯಮಾಡಿ ಚಾಣಕ್ಯನನ್ನ ಅವಮಾನಿಸಿದ್ದರು. ಅಲ್ದೇ ಬ್ರಹ್ಮ ಭೋಜನದಿಂದ ಮಧ್ಯದಲ್ಲೇ ಎದೇಳುವಂತೆ ಆದೆಶ ನೀಡಿದ್ರು. ಈ ಅವಮಾನದಿಂದ ಕೋಪಗೊಂಡ ಚಾಣಕ್ಯರು ತಕ್ಷಣವೇ ಸಿಟ್ಟಿನಲ್ಲಿ ತಾವು ಕಟ್ಟಿದ್ದ ಜಡೆಯನ್ನ ಬಿಚ್ಚಿ ಧನಾಂನಂದನಿಗೆ ಸವಾಲ್ ಹಾಕ್ತಾರೆ. ನಂದವಂಶದ ನಿರ್ಣಾಮ ಮಾಡುವ ವರೆಗೂ ತನ್ನ ಕೂದಲನ್ನು ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅಲ್ಲಿಂದ ಹೊರಟು ಹೋಗ್ತಾರೆ.

ಇಲ್ಲಿಂದಲೇ ಚಾಣಕ್ಯನ ಜೀವನದ ಏಕಮಾತ್ರ ಉದ್ದೇಶ, ಗುರಿ ನಂದ ವಂಶದ ನಿರ್ಣಾಮ ಮಾಡಿ ತಾನು ಆಯ್ಕೆ ಮಾಡಿದವನನ್ನ ರಾಜನಾಗಿ ಮಾಡುವುದು. ಇದೇ ಪ್ರತಿಜ್ಞೆಯಲ್ಲೇ ವಿಂಧ್ಯಾ ಎನ್ನುವ ಕಾಡಿಗೆ ಹೋದ ಚಾಣಕ್ಯ ಅಲ್ಲಿ ಚಿನ್ನದ ನಾಣ್ಯಗಳನ್ನ ತಯಾರಿಸೋದಕ್ಕೆ ಶುರುಮಾಡ್ತಾರೆ. ಇದು ಅಂತಿತ ನಾಣ್ಯಗಳಾಗಿರಲಿಲ್ಲ. ಬದಲಾಗಿ ಒಂದು ಸೀಕ್ರೇಟ್ ಟೆಕ್ ನಿಕ್ ನಿಂದ ತಯಾರಿಸಲಾಗಿದ್ದ ನಾಣ್ಯಗಳು. ಅಂದ್ರೆ 1 ನಾಣ್ಯದಿಂದ 8 ನಾಣ್ಯಗಳನ್ನಾಗಿ ಪರಿವರ್ತಿಸುವ ಕ್ಷಮತೆಯನ್ನ ಹೊಂದಿತ್ತು. ಈ ರೀತಿ ಒಟ್ಟು 800 ಮಿಲಿಯನ್ ನಾಣ್ಯಗಳನ್ನ ತಯಾರಿಸಿದ ಚಾಣಕ್ಯ ಅವನ್ನೆಲ್ಲ ಒಂದು ಮರದ ಕೆಳಗೆ ಗುಂಡಿ ತೋಡಿ ಬಚ್ಚಿಟ್ಟಿದ್ದರು.chanakya - saakshatv

ಬಳಿಕ ನಂದ ವಂಶದ ಸಾಮ್ರಾಜ್ಯವನ್ನ ಉರುಳಿಸಿ ರಾಜನಾಗಿ ಆಡಳಿತ ನಡೆಸುವ ಯೋಗ್ಯತೆಯಿರುವ ವ್ಯಕ್ತಯ ಹುಡುಕಾಟದಲ್ಲಿ ಹೊರಟ ಚಾಣಕ್ಯನಿಗೆ ಅಂತಹ ಬಾಲಕ ಕೊನೆಗೂ ಸಿಕ್ಕಿದ್ದ. ಆತನೇ ಚಂದ್ರಗುಪ್ತ ಮೌರ್ಯ. ಆತ ಇತರೇ ಬಾಲಕರ ಜೊತೆ ಹೊಡೆದಾಡಿಕೊಳ್ಳುತ್ತಿದ್ದನನ್ನ ಗಮನಿಸಿದ ಚಾಣಾಕ್ಯ ಆತನ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ನಂತರ ಆತ ಮೌರ್ಯ ಸಾಮ್ರಾಜ್ಯದ ರಾಜಕುಮಾರ ಎಂಬ ವಿಚಾರ ಗೊತ್ತಾಗುತ್ತೆ. ರಾಜ್ಯದ ದುರಾಸೆಯಿಂದ ಮೌರ್ಯ ಸಾಮ್ರಾಜ್ಯದ ರಾಜ, ಚಂದ್ರಗುಪ್ತನ ತಂದೆಯ ಹತ್ಯೆಯಾಗಿದ್ದ ಬಳಿಕ ಆತನನ್ನ ರಾಜ್ಯದಿಂದ ಹೊರಗಟ್ಟಿದ್ದ ವಿಚಾರವೂ ಚಾಣಕ್ಯರಿಗೆ ತಿಳಿಯುತ್ತೆ. ಮತ್ತೊಂಂದೆಡೆ ಧನಾನಂದನ ಮಗ ಬಗ್ಭಾತನ ಜೊತೆಗೆ ಸ್ನೇಹವನ್ನ ಬೆಳೆಸಿಕೊಂಡಿದ್ದರು ಚಾಣಕ್ಯ.

ಇಬ್ಬರ ನಡುವೆ ಯಾರು ಉತ್ತಮ ಆಡಳಿತಗಾರನಾಗಬಹುದು ಎಂಬ ಆಲೋಚನೆ ಮಾಡಿದ ಚಾಣಾಕ್ಯ ಇಬ್ಬರಿಗೂ ಒಂದು ಪರೀಕ್ಷೆ ನೀಡ್ತಾರೆ. ಇಬ್ಬರಿಗೂ ಒಂದೊಂದು ತಾಯಿತಗಳನ್ನ ಕೊಟ್ಟ ಚಾಣಕ್ಯ ಕತ್ತಿನಲ್ಲಿ ಧರಿಸುವಂತೆ ತಿಳಿಸಿದ್ದರು. ಹೀಗೆ ಒಂದು ದಿನ ಚಾಣಕ್ಯ ಬಗ್ಬಾತನಿಗೆ ಚಾಣಕ್ಯನ ಕತ್ತಿನಿಂದ ಆ ತಾಯತ ತರಲು ಹೆಳ್ತಾರೆ. ಗಾಢ ನಿದ್ರೆಯಲ್ಲಿದ್ದ ಚಾಣಕ್ಯನ ಬಳಿ ತೆರಳಿದ ಬಗ್ಭಾತ ಎಷ್ಟೇ ಪ್ರಯತ್ನ ಪಟ್ಟರು ತಾಯಿತ ತೆಗೆಯಲು ಸಾಧ್ಯವಾಗದೇ ವಿಫಲನಾಗ್ತಾನೆ.chanakya - saakshatv

ಆದ್ರೆ ಇದೇ ಪರೀಕ್ಷೆಯನ್ನ ಚಾಣಕ್ಯ ಚಂದ್ರಗುಪ್ತನಿಗೆ ನೀಡಿದಾಗ ಆ ಬಾಲಕ ತಾಯಿತ ತರುವಲ್ಲಿ ಯಶಸ್ವಿಯಾಗ್ತಾನೆ. ತನ್ನ ತಲ್ವಾರ್ ನಿಂದ ಬಗ್ಭಾತನನ್ನ ಹತ್ಯೆಗೈದು ತಾಯಿತ ತಂದು ಚಾಣಕ್ಯರಿಗೆ ಕೊಡ್ತಾನೆ. ಇಲ್ಲಿಂದ ಚಂದ್ರಗುಪ್ತನಿಗೆ ರಾಜನೀತಿ, ತಲ್ವಾರ್ ಬಾಜಿ, ರಾಜನೈತಿಕತೆಯ ಶಿಕ್ಷಣವನ್ನ ನೀಡಲಿಕ್ಕೆ ಚಾಣಕ್ಯ ಪ್ರಾರಂಭಿಸುತ್ತಾರೆ. ಬಳಿಕ ಬಚ್ಚಿಟ್ಟಿದ್ದ ಚಿನ್ನದ ನಾಣ್ದಯಗಳನ್ನ ತೆಗೆದು ಒಂದು ವಿಶಾಲವಾದ ಸೇನೆಯನ್ನ ತಯಾರು ಮಾತಡಾರೆ. ಚಾಣಕ್ಯ ಬಳಿಕ ಮಗದ್ ಗೆ ದಂಡೆತ್ತಿ ಹೋಗಿ ನಂದವಂಶವನ್ನ ಸೋಲಿಸಿ ರಾಜ್ಯವನ್ನ ವಶಕ್ಕೆ ಪಡೆಯುತ್ತಾರೆ. ಹೀಗೆ ತನಗಾದ ಅಪಮಾನಕ್ಕೆ ಸೇಡುತೀರಿಸಿಕೊಂಡ ಚಾಣಕ್ಯ ಕೊನೆಯ ಕ್ಷಣದ ವರೆಗೂ ಮಗದ್ ನಲ್ಲಿ ಚಂದ್ರಗುಪ್ತನ ಆ ಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.

Skin care Tips – ಕಾಸ್ಮೆಟಿಕ್ಸ್ ಇಂದ ಉಂಟಾಗುವ ಅಲರ್ಜಿ ನಿವಾರಿಸಿಕೊಳ್ಳುವಕ್ಕೆ ನೈಸರ್ಗಿಕ ಟಿಪ್ಸ್ ..!!!

Tags: #saakshatvacharya chanakyaindiananda empire
ShareTweetSendShare
Join us on:

Related Posts

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

by Honnappa Lakkammanavar
April 26, 2023
0

ಹೆಚ್ಚು ಜನಪ್ರಿಯ ಹಾಗೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ವಾಟ್ಸ್‌ ಆಪ್‌ ತನ್ನ ಬಳಕೆದಾರರ ಬಹುಬೇಡಿಕೆಯ ಫೀಚರ್‌ ಪರಿಚಯಿಸಿದೆ. ಅದರಂತೆ, ಇನ್ನು ಮುಂದೆ ಬಳಕೆದಾರರು ಕೇವಲ ಒಂದು ಮೊಬೈಲ್‌...

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

by Honnappa Lakkammanavar
April 17, 2023
0

ವಾಟ್ಸಾಪ್‌ ಬಳಕೆದಾರರ ಸುರಕ್ಷತೆಯ ಹಿನ್ನೆಲೆಯಲ್ಲಿ ವಾಟ್ಸಾಪ್ ಕಂಪನಿಯು 3 ಹೊಸ ಫೀಚರ್‌ ಬಿಡುಗಡೆ ಮಾಡಿದೆ. ಇದು ಮೊಬೈಲ್‌ ಸಾಮಾಜಿಕ ತಾಣವನ್ನು ಮತ್ತಷ್ಟು ಸುರಕ್ಷಿತ ಮಾಡಲಿದೆ ಎಂದು ಕಂಪನಿ...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

by admin
April 16, 2023
0

ಮೊನ್ನೆ ಮೊನ್ನೆ ಬಿಜೆಪಿಗೆ ಬಂದವರಿಗೂ ಸ್ಥಾನಮಾನ ಸಿಕ್ಕಿದೆ. ಜೆಡಿಎಸ್ ನಾ ಜಿಲ್ಲಾಧ್ಯಕ್ಷನಾಗಿದ್ದ ಭರತ್ ಶೆಟ್ಟಿಯು ಶಾಸಕರಾದ್ರು, ಇಂತಹ ಉದಾಹರಣೆ ಎಷ್ಟೋ ಸಿಗುತ್ತೆ! ಗೋಕಾಕ್ ನಾ ಸಿಡಿ ಕಿಂಗ್...

ಪುತ್ತೂರಿನಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿರುವ ಹಿಂದೂ ಸಂಘಟನೆ ಮುಖಂಡ!

ಪುತ್ತಿಲ ಪರ ಪುತ್ತೂರಿನಲ್ಲಿ ಫೀಲ್ಡ್ ಗೆ ಇಳಿಯೋದು ಬಿಜೆಪಿಯಲ್ಲಿರೋ ಅಸಲಿ ಹಿಂದೂಗಳು..!

by admin
April 16, 2023
0

ಯಾರು ಊಹೆ ಮಾಡಿರಲ್ಲ, ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ರಣ ಕಣಕ್ಕೆ ದುಮುಕ್ಕುತ್ತಾರೆ ಎಂದು, ಆದ್ರೆ, ಹಿಂದೂ ಕಾರ್ಯಕರ್ತರ ಪರವಾಗಿ ಪುತ್ತಿಲರಿಗೂ ಇದು ಅನಿವಾರ್ಯ... ಈಗಾಗಲೇ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ತಾಂತ್ರಿಕ ದೋಷವೇ ವಿಮಾನ ಪತನಗೊಳ್ಳಲು ಕಾರಣ!

ತಾಂತ್ರಿಕ ದೋಷವೇ ವಿಮಾನ ಪತನಗೊಳ್ಳಲು ಕಾರಣ!

June 1, 2023
ಕಾಂಗ್ರೆಸ್ ಗ್ಯಾರಂಟಿ : ಫ್ರೀ ಬಸ್ ಭಾಗ್ಯದಿಂದ ಹಲವರು ವಂಚಿತ?

ಕಾಂಗ್ರೆಸ್ ಗ್ಯಾರಂಟಿ : ಫ್ರೀ ಬಸ್ ಭಾಗ್ಯದಿಂದ ಹಲವರು ವಂಚಿತ?

June 1, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram