ತುಮಕೂರು: ಖಾಸಗಿ ಬಸ್ ನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್ ಸ್ಫೋಟವಾಗಿರುವ ಘಟನೆ ನಡೆದಿದೆ.
ಈ ಘಟನೆ ತಾಲೂಕಿನ ಗೂಳೂರು ಹತ್ತಿರ ನಡೆದಿದೆ. ಘಟನೆಯಲ್ಲಿ ಬಸ್ ನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್ಗಳನ್ನು ಶಕೀಲಾ ಬಾನು (48) ಎಂಬ ಮಹಿಳೆ ತರುತ್ತಿದ್ದಳು ಎನ್ನಲಾಗಿದೆ.
ಬಸ್ ನಲ್ಲಿ ಬಾಟಲ್ ಗಳನ್ನು ಇಟ್ಟುಕೊಂಡು ತುಮಕೂರು ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಿಂದ ಅವರು ಬರುತ್ತಿದ್ದರು. ಈ ಸಂದರ್ಭದಲ್ಲಿ ಅವರು ಸ್ಪೋಟಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾಟಲ್ಗಳಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.