ಮಧ್ಯಪ್ರದೇಶದಲ್ಲಿ ‘ಲವ್ ಜಿಹಾದ್’ ವಿರೋಧಿ ಕಾಯ್ದೆ ಅಂಗೀಕಾರ..!
ಮಧ್ಯಪ್ರದೇಶ: ಉತ್ತರಪ್ರದೇಶ ಹಾಗೂ ಕೆಲ ರಾಜ್ಯಗಳು ಮತಾಂತರ ವಿರೋಧಿ ಕಾಯ್ದೆಯನ್ನ ಜಾರಿಗೊಳಿಸಿದ ಬೆನ್ನಲ್ಲೇ ಇದೀಗ ಮಧ್ಯಪ್ರದೇಶದಲ್ಲೂ ಲವ್ ಜಿಹಾದ್ ವಿರುದ್ಧದ ಮಸೂದೆ ಅಂಗೀಕಾರವಾಗಿದೆ.
ಮಧ್ಯಪ್ರದೇಶ ವಿಧಾನಸಭಾ ಅಧಿವೇಶನದಲ್ಲಿ ಮತಾಂತರ ವಿರೋಧಿ ಮಸೂದೆಗೆ ಅಂಗೀಕಾರ ನೀಡಲಾಗಿದೆ. ರಾಜ್ಯ ವಿಧಾನಸಭಾ ಸದಸ್ಯರು ಧ್ವನಿ ಮತದ ಮೂಲಕ ಮಸೂದೆಯ ಪರ ಮತ್ತು ವಿರೋಧ ಮತ ಚಲಾಯಿಸಿದರು. ಮತಾಂತರ ವಿರೋಧಿ ಮಸೂದೆಗೆ ಸಂಬಂಧಿಸಿದಂತೆ ಪರವಾಗಿ ಹೆಚ್ಚು ಮತಗಳು ಬಿದ್ದ ಹಿನ್ನೆಲೆ ಮಸೂದೆ ಅಂಗೀಕಾರಗೊಂಡಿದೆ.
ಅನ್ಯಧರ್ಮೀಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಅಥವಾ ಇನ್ಯಾವುದೇ ಮೋಸದ ವಿಧಾನಗಳಿಂದ ಮತಾಂತರ ಮಾಡುವುದನ್ನು ತಡೆಗಟ್ಟುವ ಉದ್ದೇಶವನ್ನ ಕಾಯ್ದೆ ಹೊಂದಿದೆ.
ಅತ್ಯಾಚಾರ ನಡೆದು 27 ವರ್ಷಗಳ ಬಳಿಕ ದೂರು ದಾಖಲಿಸಿದ ಮಹಿಳೆ : ಕಾರಣ ಆಕೆಯ ಮಗ..!
ಈ ಕಾನೂನಿನ ಕೆಳಗೆ ವಿವಾಹದ ಕಾರಣ ಒಡ್ಡಿ ಅಥವಾ ಬೇರೆ ಮೋಸದ ವಿಧಾನಗಳಿಂದ ಮತ ಪರಿವರ್ತನೆ ಮಾಡುವುದು ಅಪರಾಧವಾಗಲಿದೆ. ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸುವ ಅವಕಾಶವಿದೆ.
ಈ ಹಿಂದೆ ಕೆಲವು ಪ್ರಕರಣಗಳಲ್ಲಿ 10 ವರ್ಷ ಜೈಲುಶಿಕ್ಷೆ ಮತ್ತು ಭಾರಿ ದಂಡವನ್ನು ವಿಧಿಸಿದ ಹಿನ್ನೆಲೆ ಮತಾಂತರ ವಿರೋಧಿ ಮಸೂದೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಕಳೆದ ಡಿಸೆಂಬರ್ ನಲ್ಲಿ ಸುಗ್ರೀವಾಜ್ಞೆಯನ್ನು ತೆರವುಗೊಳಿಸಿದ ಸಂಪುಟವು ಈ ಬಗ್ಗೆ ಜನವರಿಯಲ್ಲಿ ಅಧಿಕೃತವಾಗಿ ಘೋಷಿಸಿತ್ತು.
ಕಳೆದ ವಾರವಷ್ಟೇ ಅಂದರೆ ಮಾರ್ಚ್ 1ರಂದು ವಿಧಾನಸಭಾ ಸದನದಲ್ಲಿ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2021ಅನ್ನು ಮಂಡಿಸಿದ್ದರು. ಈ ಸಂಬಂಧ ಸುದೀರ್ಘ ಚರ್ಚೆಯ ಬಳಿಕ ಧ್ವನಿ ಮತದ ಮೂಲಕ ಮಸೂದೆ ಅಂಗೀಕರಿಸಲಾಗಿದೆ.
15 ವರ್ಷದ ಬಾಲಕಿ ಮೇಲೆ 9 ಕಾಮುಕರಿಂದ 8 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ
ವಿವಾಹ ಮತ್ತು ಯಾವುದೇ ಮಾರ್ಗದ ಮೂಲಕ ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದು ಕಂಡು ಬಂದಲ್ಲಿ ಅಂಥವರಿಗೆ ದಂಡದ ಜೊತೆಗೆ ಜೈಲುಶಿಕ್ಷೆಯನ್ನು ವಿಧಿಸುವುದಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಬೆದರಿಕೆ, ಅನಗತ್ಯ ಪ್ರಭಾವ, ಬಲಾತ್ಕಾರ, ಮದುವೆ ಅಥವಾ ಇನ್ನಿತರ ಮೋಸದ ವಿಧಾನಗಳಿಂದ ಮತಾಂತರಕ್ಕೆ ಪ್ರಯತ್ನಿಸುವುದು ಕಂಡು ಬಂದರೆ ಅಂಥವರಿಗೆ ಈ ಸುಗ್ರೀವಾಜ್ಞೆಯು ಧಾರ್ಮಿಕ ಸ್ವಾತಂತ್ರ್ಯ ಮಸೂದೆ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಹೇಳಿದೆ. ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರ, ನಮ್ಮ ಹೆಣ್ಣುಮಕ್ಕಳನ್ನು ಅಪಾಯಕ್ಕೆ ತಳ್ಳುವ, ನಮ್ಮ ಭಾವನೆಗಳಿಗೆ ಧಕ್ಕೆ ತರುವ, ಲವ್ ಜಿಹಾದ್ ಗೆ ನಮ್ಮ ವಿರೋಧವಿದೆ ಎಂದರು.








