ಅತ್ಯಾಚಾರ ನಡೆದು 27 ವರ್ಷಗಳ ಬಳಿಕ ದೂರು ದಾಖಲಿಸಿದ ಮಹಿಳೆ : ಕಾರಣ ಆಕೆಯ ಮಗ..!
ಉತ್ತರ ಪ್ರದೇಶ: ಅಪರಾಧಗಳ ಆಗರ ಉತ್ತರಪ್ರದೇಶದಲ್ಲಿ ಮತ್ತೊಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. 40 ವರ್ಷದ ಮಹಿಳಯೊಬ್ಬಳು ತನ್ನ ಮೇಲೆ ಅತ್ಯಾಚಾರ ನಡೆದು ಬರೋಬ್ಬರಿ 27 ವರ್ಷಗಳ ಬಳಿಕ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಹೌದು ತನ್ನ ತಂದೆ ಯಾರು ಎಂದು ಆಕೆಯ ಮಗ ಆಗಾಗ ಪ್ರಶ್ನೆ ಕೇಳುತ್ತಿದ್ದ. ಪೀಡಿಸುತ್ತಿದ್ದ. ಇದರಿಂದ ಷಹಜಾನ್ ಪುರದಲ್ಲಿ 27 ವರ್ಷಗಳ ಹಿಂದೆ ಅತ್ಯಾಚಾರವೆಸಗಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧ ಇದೀಗ ಎಫ್ ಐಆರ್ ದಾಖಲಿಸಿದ್ದಾಳೆ. ಷಹಜಾನ್ ಪುರದ ಸಂಬಂಧಿಕರ ಮನೆಯೊಂದರಲ್ಲಿ ವಾಸವಿರುವಾಗ ಮಹಿಳೆ ಮೇಲೆ 1994ರಲ್ಲಿ ಅಂದ್ರೆ ಮಹಿಳೆ 14 ವರ್ಷದ ಬಾಲಕಿಯಾಗಿದ್ದಾಗ ಅತ್ಯಾಚಾರ ನಡೆದಿತ್ತು.
15 ವರ್ಷದ ಬಾಲಕಿ ಮೇಲೆ 9 ಕಾಮುಕರಿಂದ 8 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ
ದೂರುದಾರ ಸಂತ್ರಸ್ತೆಯ ಮನೆಯ ಹತ್ತಿರ ವಾಸವಿದ್ದ ನಾಕಿ ಹಸನ್ ಹಾಗೂ ಆತನ ಸಹೋದರ, ಗುಡ್ಡು ಕೂಡಾ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆ ತನ್ನ ಮೇಲೆ ಅತ್ಯಾಚಾರ ನಡೆದ ವಿಚವಾರವನ್ನೂ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಬಳಿಕ ಆಕೆಯ ಸಂಬಂಧಿಗಳಾದ ಅಕ್ಕ ಹಾಗೂ ಭಾವನ ಜೊತೆಗೆ ಬೇರೆಡೆಗೆ ಶಿಫ್ಟ್ ಆಗಿದ್ದರು. ಅಲ್ಲಿ ಆಕೆ ಗರ್ಭವತಿಯಾದ ವಿಚಾರ ಗೊತ್ತಾಗಿದ್ದು ಆಕೆ ತನ್ನ ಅಕ್ಕನಿಗೆ ನಡೆದ ವಿಚಾರವನ್ನ ತಿಳಿಸಿದ್ದಾಳೆ. ಇದಾದ ಬಳಿಕ ಆಕೆಯ ಅಕ್ಕ ಭಾವ ಈ ಬಗ್ಗೆ ಮಾತನಾಡಿದಾಗ ಆರೋಪಿಗಳು ಇಬ್ಬರಿಗೂ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇನ್ನೂ ಬಾಲಕಿಗೆ ಆಗ ಕೇವಲ 14 ವರ್ಷ ವಯಸ್ಸಾಗಿದ್ದ ಹಿನ್ನೆಲೆ ಗರ್ಭಪಾತ ಮಾಡುವುದಕ್ಕೂ ವೈದ್ಯರು ಒಪ್ಪಿಗೆ ನೀಡಿರಲಿಲ್ಲ.
3 ಚಲಿಸುತ್ತಿದ್ದ ಕಾರುಗಳಲ್ಲಿ 12 ಜನರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ವಿಡಿಯೋ ವೈರಲ್..!
ಬಳಿಕ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಮಗುವನ್ನು ಬೇರೆಯವರಿಗೆ ದತ್ತು ನೀಡಲಾಗಿತ್ತು. ಇದಾದ ಬಳಿಕ ಮಹಿಳೆಗೆ ಬೇರೆಯೊಬ್ಬನ ಜೊತೆಗೆ ವಿವಾಹವಾಗಿತ್ತು. ಆದರೆ ಅತ್ಯಾಚಾರದ ವಿಚಾರ ತಿಳಿದು ಆತ ಮಹಿಳೆಗೆ ಡೈವೋರ್ಸ್ ನೀಡಿದ್ದ.
ಮತ್ತೆ ಕೆಲ ವರ್ಷಗಳಿಂದ ಮಗನ ಜೊತೆಗೆ ಮಹಿಳೆ ಸಂಪರ್ಕ ಬೆಳೆಸಿದ್ದು, ಮಗ ತಂದೆಯ ಬಗ್ಗೆ ಕೇಳುತ್ತಲೇ ಇದ್ದಾನೆ ಎಂದು ಆರೋಪಿಸಿ ಮಹಿಳೆ ದೂರು ದಾಖಲಿಸಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಡಿಎನ್ ಎ ಪರೀಕ್ಷೆಗೆ ಆರೋಪಿಗಳನ್ನ ಹಾಗೂ ಸಂತ್ರಸ್ತೆ ಮಗನ್ನನ್ನ ಒಳಪಡಿಸಲು ತಯಾರಿ ನಡೆಸಿದ್ದಾರೆ. ಇನ್ನೂ ಆರೋಪಿಗಳನ್ನ ಪತ್ತೆ ಹಚ್ಚಲಾಗಿದ್ದು ಬಂಧನಕ್ಕೂ ಮುನ್ನ ಸೂಕ್ತ ಸಾಕ್ಷಿಗಳನ್ನ ಜೋಡಿಸುವ ಕೆಲಸದಲ್ಲಿ ತೊಡಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.