ನಟ ದರ್ಶನ್ (Darshan) ಅಭಿನಯದ ಕಾಟೇರ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವೈಗಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಸುಳ್ಳೋ ನಿಜವೋ ಗೊತ್ತಿಲ್ಲ. ಗಾಂಧಿನಗರದಲ್ಲಿ ದರ್ಶನ್ ಮುಂದಿನ ಚಿತ್ರದ ಕುರಿತು ಮತ್ತೊಂದು ಸುದ್ದಿ ಸದ್ದು ಮಾಡುತ್ತಿದೆ.
ಕಾಟೇರ ಸಿನಿಮಾ ರಿಲೀಸ್ ನಂತರ ದರ್ಶನ್ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಸದ್ಯಕ್ಕೆ ಆ ಚಿತ್ರದ ಶೂಟಿಂಗ್ ಇನ್ನೂ ಆರಂಭವಾಗಿಲ್ಲ. ಇದರ ಮಧ್ಯೆ ಮತ್ತೊಂದು ಸಿನಿಮಾದ ಕುರಿತು ವಿಷಯ ಸದ್ದು ಮಾಡುತ್ತಿದ್ದು, ಜೋಗಿ ಪ್ರೇಮ್ (Jogi Prem) ನಿರ್ದೇಶನದಲ್ಲಿ ದರ್ಶನ್ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ (Chiranjeevi) ಕೂಡ ಇರಲಿದ್ದಾರೆ ಎನ್ನಲಾಗಿದೆ.
ದರ್ಶನ್ ಮತ್ತು ಪ್ರೇಮ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರುತ್ತಿರುವದು ಕೂಡ ಸಿನಿ ರಸಿಕರ ಸಂತಸಕ್ಕೆ ಕಾರಣವಾಗುತ್ತಿದೆ.