ಆರ್ಥಿಕ ಸಹಾಯ ಮಾಡಿ : ಆಸ್ಪತ್ರೆಯಲ್ಲಿ ನಟ ಪೊನ್ನಂಬಲಂ

1 min read
ponnambalam

ಆರ್ಥಿಕ ಸಹಾಯ ಮಾಡಿ : ಆಸ್ಪತ್ರೆಯಲ್ಲಿ ನಟ ಪೊನ್ನಂಬಲಂ

ಬಹುಭಾಷಾ ನಟ ಪೊನ್ನಂಬಲಂ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ವೆಚ್ಚಗಳಿಗಾಗಿ ಸಹಾಯ ಮಾಡುವಂತೆ ಕೋರಿಕೊಂಡಿದ್ದಾರೆ.

ಪೊನ್ನಂಬಲಂ ಅವರು ತೆಲುಗು ಮತ್ತು ತಮಿಳು ಮುಂತಾದ ವಿವಿಧ ಭಾಷೆಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.

ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಪೊನ್ನಂಬಲಂ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ponnambalam

ಸದ್ಯ ಅವರಿಗೆ ಕಿಡ್ನಿ ಕಸಿ ಮಾಡುವ ಅವಶ್ಯಕತೆ ಇದ್ದು, ಇದಕ್ಕಾಗಿ ಆರ್ಥಿಕ ಸಹಾಯ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಅವರು ಶುಕ್ರವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈಗಾಗಲೇ ಪೊನ್ನಂಬಲಂ ಅವರಿಗೆ ನಟ ರಜನಿಕಾಂತ್, ಕಮಲ್ ಹಾಸನ್, ರಾಧಿಕಾ ಶರತ್‍ಕುಮಾರ್, ಧನು ಧನುಷ್, ಕೆ.ಎಸ್.ರವಿಕುಮಾರ್, ರಾಘವ ಲಾರೆನ್ಸ್ ಮತ್ತು ಇಶ್ರಿ ಗಣೇಶ್ ಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ.

ಈಗ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಹಣ ಅವಶ್ಯಕತೆ ಇರುವುದರಿಂದ ದಾನಿಗಳು, ದಕ್ಷಿಣ ಭಾರತದ ನಟರ ಸಂಘ ಮತ್ತು ತೆಲುಗು ಮಾ ಸಂಘದ ಪರವಾಗಿ ಸೂಕ್ತ ಆರ್ಥಿಕ ನೆರವು ನೀಡಬೇಕು ಎಂದು ಪೊನ್ನಂಬಲಂ ವಿನಂತಿಸಿಕೊಂಡಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd