ನಟಿ ಅನುಷ್ಕಾ ಶೆಟ್ಟಿ (Anushka Shetty) ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗುತ್ತಿದೆ.
ನಗುವಿನ ಕಾಯಿಲೆಯಿಂದ ‘ಬಾಹುಬಲಿ’ (Bahubali) ನಟಿ ಬಳಲುತ್ತಿದ್ದಾರೆ ಎನ್ನಲಾಗಿದೆ. ಸಂದರ್ಶನವೊಂದರಲ್ಲಿ ನಟಿ ಸ್ವತಃ ಈ ಕುರಿತು ಹೇಳಿದ್ದಾರೆ. ಇದು ದೊಡ್ಡ ಸಮಸ್ಯೆಯಲ್ಲ. ಅದರಿಂದ ಅನೇಕ ಮುಜುಗರಕ್ಕೆ ಒಳಗಾಗಿದ್ದು ಇದೆ. ಅನುಷ್ಕಾ ಒಮ್ಮೆ ನಗಲು ಶುರು ಮಾಡಿದರೆ ನಿಲ್ಲಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಇದರಿಂದ ಶೂಟಿಂಗ್ ವೇಳೆ ಮುಜುಗರ ಎದುರಿಸಿದ್ದೇನೆ ಎಂದು ಹೇಳಿದ್ದಾರೆ.
ಒಮ್ಮೊಮ್ಮೆ ನೆಲದ ಮೇಲೆ ಬಿದ್ದು ಸಹ ನಕ್ಕಿದ್ದಾರಂತೆ. ಯಾವುದಾದರೂ ಕಾಮಿಡಿ ಸೀನ್ ಚಿತ್ರೀಕರಣ ಮಾಡಬೇಕಾದರೆ ಪಳ್ಳನೆ ನಗು ಬಂದು ಬಿಡುತ್ತಿತ್ತಂತೆ. ಆಗ ಸುಮಾರು 20 ನಿಮಿಷ ಕಂಟ್ರೋಲ್ ಆಗುವುದಿಲ್ಲವಂತೆ. ಹಿಂದಿನ ವರ್ಷ ಅನುಷ್ಕಾ ಶೆಟ್ಟಿ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಯಶಸ್ವಿ ಕಂಡಿತ್ತು. ಈಗ ತೆಲುಗಿನ ‘ಘಾಟಿ’ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಲ್ಲದೇ, ‘ಕಥನಾರ್’ ಸಿನಿಮಾದಲ್ಲಿ ಕೂಡ ನಟಿಸಲಿದ್ದಾರೆ.