ತಾಯಿಯಾಗುತ್ತಿದ್ದಾರೆ ಸ್ಯಾಂಡಲ್ ವುಡ್ ನಟಿ – ಪ್ರಣಿತಾ ಸುಭಾಷ್ ಪ್ರಗ್ನೆಂಟ್

1 min read

 ತಾಯಿಯಾಗುತ್ತಿದ್ದಾರೆ ಸ್ಯಾಂಡಲ್ ವುಡ್ ನಟಿ – ಪ್ರಣಿತಾ ಸುಭಾಷ್ ಪ್ರಗ್ನೆಂಟ್

ಸ್ಯಾಂಡಲ್ ವುಡ್ ನ ಖ್ಯಾತ ನಟಿ ಪ್ರಣಿತಾ ಸುಭಾಷ್ ತಾಯಿಯಾಗುತ್ತಿದ್ದಾರೆ, ಈ ಸಂತೋಷದ ಸುದ್ದಿಯನ್ನ ನಟಿ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಪ್ರಣೀತಾ ಸುಭಾಷ್ 2021ರ ಮೇ 30ರಂದು ಅತ್ಯಾಪ್ತರ ಸಮ್ಮುಖದಲ್ಲಿ  ಉದ್ಯಮಿ ನಿತಿನ್ ರಾಜು ಅವರೊಂದಿಗೆ ಹಸೆಮಣೆ ಏರಿದ್ದರು.

ನನ್ನ ಪತಿಯ 34ನೇ ಹುಟ್ಟುಹಬ್ಬದಂದು ಒಂದು ವಿಶೇಷ ಸುದ್ದಿಯನ್ನು ಹೇಳುತ್ತಿದ್ದೇನೆ. ನಮ್ಮ ಮನೆಗೆ ಏಂಜಲ್ಸ್ ಬರುತ್ತಿದ್ದಾರೆ ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ಒಂದು ಕೈಯಲ್ಲಿ ಸ್ಕ್ಯಾನಿಂಗ್ ಕಾಪಿ ಇನ್ನೊಂದರಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಹಿಡಿದುಕೊಂಡಿರುವ ಪೋಟೋವನ್ನ ಪ್ರಣಿತಾ ಸೋಶಿಯಲ್  ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಅಭಿಮಾನಿಗಳು ಸೇರಿ ಚಿತ್ರರಂಗದ ಹಲವರು ಶುಭಕೋರಿದ್ದಾರೆ.

ಈ ಹಿಂದೆ ಪ್ರಣೀತಾ ತಮ್ಮ ಮದುವೆ ವಿಷಯವನ್ನು ತಡವಾಗಿ ತಿಳಿಸಿದ್ದಕ್ಕೆ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದರು.  ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮದುವೆಗೆ ಯಾರನ್ನು ಆಮಂತ್ರಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ ಎಂದು ಬರೆದು ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

2010 ರಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಣಿತ ದರ್ಶನ್ ಅಭಿನಯದ ಪೊರ್ಕಿ ಚಿತ್ರದಿಂದ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದರು.  ಕನ್ನಡ ಸೇರಿದಂತೆ ತಮಿಳು ತೆಲುಗು ಹಿಂದಿ ಭಾಷೆಗಳಲ್ಲೂ ಪ್ರಣಿತಾ ಆಭಿನಯಿಸಿದ್ದಾರೆ.

Actress Pranitha is happy for becoming a mother

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd