‘ಆನ್ ಲೈನ್ ಶಾಪಿಂಗ್ ‘ ಕ್ಷೇತ್ರಕ್ಕೆ ಅದಾನಿ ಗ್ರೂಪ್ಸ್ ಎಂಟ್ರಿ..!
ನವದೆಹಲಿ : ಆನ್ ಲೈನ್ ಶಾಪಿಂಗ್ ಕ್ಷೇತ್ರದಲ್ಲಿ ಟಫ್ ಕಾಂಪಿಟೇಷನ್ ನಡುವೆಯೇ ತಮ್ಮ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಸ್ಪರ್ಧಾ ಅಖಾಡಕ್ಕೆ ಅದಾನಿ ಗ್ರೂಪ್ಸ್ ಎಂಟ್ರಿ ಕೊಟ್ಟಿದೆ. ಹೌದು… ಉದ್ಯಮಿ ಗೌತಮ್ ಅದಾನಿ ‘ಆನ್ ಲೈನ್ ಶಾಪಿಂಗ್ ‘ ಕ್ಷೇತ್ರ ಪ್ರವೇಶ ಮಾಡಿದ್ದಾರೆ. ಅಮೆಜಾನ್, ರಿಲಯನ್ಸ್ ಜಿದ್ದಾಜಿದ್ದಿನ ಗುದ್ದಾಟದ ನಡುವೆ ಈ ಎರೆಡೂ ಕಂಪನಿಗಳಿಗೂ ಟಕ್ಕರ್ ಕೊಡೋಕೆ ಗೌತಮ್ ಅದಾನಿ ಕೂಡ ಎಂಟ್ರಿಕೊಟ್ಟಿದ್ದಾರೆ.
ಅಂದ್ಹಾಗೆ ಅದಾನಿ ಅವರೊಂದಿಗೆ ವಾಲ್ ಮಾರ್ಟ್ ನ ಇ-ಕಾಮರ್ಸ್ ಘಟಕವು ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಅತಿದೊಡ್ಡ ರಿಟೇಲ್ ದಾಸ್ತಾನು ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಒಪ್ಪಂದದ ಪ್ರಕಾರ, ಅದಾನಿ ಲಾಜಿಸ್ಟಿಕ್ಸ್ ಲಿ. ಸಂಸ್ಥೆಯು ಮುಂಬೈನ ಲಾಜಿಸ್ಟಿಕ್ಸ್ ಹಬ್ನಲ್ಲಿ 5,34,000 ಚ.ಅಡಿಯ ದಾಸ್ತಾನು ಕೇಂದ್ರವನ್ನು ಸ್ಥಾಪಿಸಿ, ಅದನ್ನು ವಾಲ್ಮಾರ್ಟ್ನ ಫ್ಲಿಪ್ಕಾರ್ಟ್ ಆನ್ಲೈನ್ ಸರ್ವೀಸಸ್ಗೆ ಭೋಗ್ಯಕ್ಕೆ ನೀಡಲಿದೆ.
2022ರ 3ನೇ ತ್ತೈಮಾಸಿಕದಲ್ಲಿ ಇದು ಸಿದ್ಧವಾಗಲಿದ್ದು, ದಾಸ್ತಾನು ಕೇಂದ್ರವು 11 ಫು ಟ್ಬಾಲ್ ಫೀಲ್ಡ್ಗಳ ಗಾತ್ರವಿರಲಿದೆ. ಜತೆಗೆ ಒಂದು ಕೋಟಿಯಷ್ಟು ಸಾಮಗ್ರಿಗಳನ್ನು ದಾಸ್ತಾನಿಡುವ ಸಾಮರ್ಥ್ಯ ಹೊಂದಿರಲಿದೆ. ಒಟ್ಟಾರೆ ಅಮೇಜಾನ್ – ರಿಲಯನ್ಸ್ ಇಂಡಸ್ಟ್ರಿಯ ನಡುವೆಯೇ ದೊಡ್ಡ ಸ್ಪರ್ಧೆ ಇರುವಾಗ್ಲೇ ಆನ್ ಲೈನ್ ಕ್ಷೇತ್ರಕ್ಕೆ ಧುಮುಕಿರುವ ಅದಾನಿ ಗ್ರೂಪ್ಸ್ ಅಮೇಜಾನ್ ಹಾಗೂ ರಿಲಯನ್ಸ್ ಗೆ ಟಕ್ಕರ್ ಕೊಡೋದು ಕನ್ ಫರ್ಮ್..
ರಂಜಾನ್ ಉಪವಾಸ ಆರಂಭ – ಆದ್ರೆ ಕೋವಿಡ್ ಗೈಡ್ ಲೈನ್ಸ್ ಫಾಲೋ ಮಾಡ್ಲೇ ಬೇಕು..!
ಜೆಪಿ ನಗರದ ಹೋಟೆಲ್ನ 19 ಮಂದಿಗೆ ಕೊರೊನಾ ದೃಢ
ಉಪವಾಸವಿದ್ದೂ ವಾಕ್ಸಿಸ್ ಪಡೆದುಕೊಳ್ಳಬಹುದಾ..?
ಛೇ..! ದಲಿತ ಯುವಕನಿಗೆ ಉಗುಳಿದ ಎಂಜಲು ನೆಕ್ಕಿಸಿದ ಗ್ರಾ.ಪಂ ಮಾಜಿ ಅಧ್ಯಕ್ಷ