ಇನ್ಮುಂದೆ ಆಧಾರ್ ಕಾರ್ಡ್ ಪಡೆಯುವುದು ತುಂಬಾನೆ ಸುಲಭ ಹೇಗಂತೀರಾ…!

1 min read
Aadhaar PVC card

ಇನ್ಮುಂದೆ ಆಧಾರ್ ಕಾರ್ಡ್ ಪಡೆಯುವುದು ತುಂಬಾನೆ ಸುಲಭ… ಹೇಗಂತೀರಾ…!

ಪ್ರಸ್ತುತ ಭಾರತದಲ್ಲಿ ಬಹುಮುಖ್ಯವಾಗಿ ಪ್ರತಿಯೊಂದು ವ್ಯವಹಾರಕ್ಕೂ ಬೇಕೇ ಬೇಕಾದ ಡಾಕ್ಯುಮೆಂಟ್ ಅಥವ ಪ್ರೂಫ್ ಆಧಾರ್ ಕಾರ್ಡ್.. ಕೆಲ ಆನ್ಲೈನ್ ದೃಢೀಕರಣಕ್ಕೆ ಆಧಾರ್ ಸಂಖ್ಯೆಯ ಅವಶ್ಯಕತೆಯಿರುತ್ತದೆ. ಆದ್ರೆ  ಇದರ ಪ್ರೊಸೀಜರ್ ಕೆಲವೊಮ್ಮೆ ಕಷ್ಟ ಎನ್ನಿಸುತ್ತೆ. ಲ್ಯಾಗ್ ಆಗುತ್ತೆ. ಆದ್ರೆ ಇದನ್ನ ಸುಲಭವಾಗಿಸಲು ಇನ್ನಷ್ಟು ಸುಲಭ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ.

ಅಂದ್ಹಾಗೆ ಇನ್ಮುಂದೆ ಯುಐಡಿಎಐ, ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ವೈಶಿಷ್ಟ್ಯವನ್ನು ನೀಡಲಾಗ್ತಿದೆ. ಮುಖ ತೋರಿಸುವ ಮೂಲಕ ಇ-ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತು ಲ್ಯಾಪ್ ಟಾಪ್ ಮೂಲಕ ಆಧಾರ್ ಡೌನ್ಲೋಡ್ ಮಾಡಬಹುದು.

ಮೊದಲು ಯುಐಡಿಎಐನ uidai.gov.in ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಗೆಟ್ ಆಧಾರ್ ಕಾರ್ಡ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಹೊಸ ಪುಟ ತೆರೆಯುತ್ತದೆ. ಅಲ್ಲಿ ಫೇಸ್ ದೃಢೀಕರಣ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೊದಲು ನೋಂದಾಯಿತ ಮೊಬೈಲ್ ಸಂಖ್ಯೆ ಹಾಕಬೇಕು. ದೃಢೀಕರಣ ಪ್ರಕ್ರಿಯೆಯ ಮೂಲಕ ಫೇಸ್ ವೆರಿಫೈ ಮಾಡಬೇಕು. ನಂತ್ರ ಓಕೆ ಮೇಲೆ ಕ್ಲಿಕ್ ಮಾಡಿ.

ಆಗ ಕ್ಯಾಮರಾ ಓಪನ್ ಆಗುತ್ತದೆ. ಅದ್ರಲ್ಲಿ ನಿಮ್ಮ ಮುಖ ಸರಿಯಾಗಿ ಕಾಣುವಂತೆ ಕುಳಿತುಕೊಳ್ಳಬೇಕು. ನಿಮ್ಮ ಮುಖ ಕ್ಯಾಪ್ಚರ್ ಆಗ್ತಿದ್ದಂತೆ ಆಧಾರ್ ಕಾರ್ಡ್ ಡೌನ್ಲೋಡ್ ಆಗುತ್ತದೆ.

ಮಾಸ್ಕ್ ವಿಚಾರಕ್ಕೆ ಆಟೋ ಚಾಲಕನನ್ನ ನಡುರಸ್ತೆಯಲ್ಲಿ ಅಮಾನುಷವಾಗಿ ಬಟ್ಟೆ ಹರಿದು, ಎಳೆದಾಡಿ ಥಳಿಸಿದ ಪೊಲೀಸರು…. VIDEO VIRAl   

BIGGBOSS 8 – ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ – ಮನೆಗೆ ಬರಲಿರುವ ಈ ಸುಂದರಿ ಯಾರು ಗೊತ್ತಾ..?

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd