ಚಂದ್ರನನ್ನು ಗೆದ್ದ ನಂತರ ಈಗ ಇಸ್ರೋ ಸೂರ್ಯನ ಅಧ್ಯಯನ ಆರಂಭಿಸಿದೆ. ಈಗ ಆದಿತ್ಯ ಎಲ್1(Aditya L1) ಯಶಸ್ವಿಯಾಗಿ ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ.
ಸೆಪ್ಟೆಂಬರ್ 5 ರ ರಾತ್ರಿ ವೇಳೆ ಎಲ್ 1 ಎರಡನೇ ಕಕ್ಷೆ ಯನ್ನು ಪ್ರವೇಶಿಸಿದೆ ಎಂದು ಇಸ್ರೋ ಹೇಳಿದೆ. ಆದಿತ್ಯ L-1 ಸೆಪ್ಟೆಂಬರ್ 10 ರಂದು ರಾತ್ರಿ 2.30 ಕ್ಕೆ ಮೂರನೇ ಕಕ್ಷೆಯನ್ನು ಪ್ರವೇಶಿಸುತ್ತದೆ ಎನ್ನುವ ಮಾಹಿತಿಯನ್ನು ಇಸ್ರೋ ನೀಡಿದೆ. ಭಾರತದ ಮೊದಲ ಸೌರ ವೀಕ್ಷಣಾಲಯವನ್ನು ಸೂರ್ಯ-ಭೂಮಿ ‘L1’ ಪಾಯಿಂಟ್ನಲ್ಲಿ ಸ್ಥಾಪಿಸುವ ಮೂಲಕ ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಗುರಿ ಹೊಂದಿದೆ.
ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ISTRAC) ಈ ಕಾರ್ಯಾಚರಣೆಯನ್ನು ನಡೆಸಿದೆ. ಹೊಸ ಕಕ್ಷೆಯು 282 ಕಿಮೀ X 40,225 ಕಿಮೀ. ಭೂಮಿಯಿಂದ ಈ ಕಕ್ಷೆಯ ಕನಿಷ್ಠ ದೂರ 282 ಕಿಮೀ ಆಗಿದ್ದರೆ, ಗರಿಷ್ಠ ದೂರ 40,225 ಕಿಮೀ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
L1 ಪಾಯಿಂಟ್ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ಸೂರ್ಯ ಮತ್ತು ಭೂಮಿಯು ಪರಸ್ಪರ ಗುರುತ್ವಾಕರ್ಷಣೆ ತಟಸ್ಥಗೊಳಿಸುತ್ತವೆ. ಭೂಮಿಯಿಂದ ಎಲ್1 ಬಿಂದು ತಲುಪಲು 125 ದಿನಗಳು ಬೇಕು.