ಮೈಸೂರು: ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ ಎಟಿಎಂ ಕಾರ್ಡ್‍ನ ಪಿನ್ ನಂಬರ್ ಯಾರೇ ಕೇಳಿದರು ಕೋಡಬೇಡಿ ಎಂದು ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮ ಅಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಗಾಯಿತ್ರಿ ತಿಳಿಸಿದರು.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಮಿರ್ಲೆ ಪಟ್ಟಣದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ, ಆಸ್ಪತ್ರೆಯ ಆರೋಗ್ಯ ಸಹಾಯಕಿಯರಿಗೆ ಹಾಗೂ ಕರೋನಾ ವಾರಿರ್ಯಸ್ ಗಳಿಗೆ ಪಡಿತರ ಕಿಟ್ ವಿತರಿಸಿ ಅಭಿನಂದಿಸಿದರು.
ಗ್ರಾಮಾಭಿವೃದ್ದಿ ಸಂಸ್ಥೆಗೆ ಹಲವಾರು ದಾನಿಗಳು ಇದ್ದಾರೆ, ಅದೇ ಮಾದರಿಯಲ್ಲಿ ಸಮುದಾಯ ಜತೆಗೂಡಿ ಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ಮಾಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದ ಪ್ರಾಯೋಜಕರಾದ ಶಿಕ್ಷಕ ಮನುಬ್ರಹ್ಮಚಾರ್, ನಿವೃತ್ತ ನೌಕರ ಗೋವಿಂದರಾಜ್, ತಾ.
ಪಂ.ಸದಸ್ಯೆ ಶೋಭಾ, ಗ್ರಾಮಾಭಿವೃದ್ದಿ ಸಂಸ್ಥೆಯ ಮೇಲ್ವಿಚಾರಕ ಸುರೇಶ್, ಗ್ರಾ.ಪಂ.ಅಧ್ಯಕ್ಷ ಸುದರ್ಶನ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಾನು 5 ವರ್ಷಗಳ ಕಾಲ ಸಿಎಂ – ಸಿದ್ದರಾಮಯ್ಯ ಹೇಳಿಕೆಯಿಂದ ಡಿಕೆಶಿಗೆ ಶಾಕ್!
ಕರ್ನಾಟಕ ರಾಜಕೀಯದಲ್ಲಿ ಮತ್ತೆ ಸಿಎಂ ಕುರ್ಚಿಯ ಗೇಮ್ ಆಫ್ ಥ್ರೋನ್ಸ್ ಚರ್ಚೆಗೆ ಗ್ರಾಸವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಟೀಮ್ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದ...