FaceBook ನಲ್ಲಿ ಪರಿಚಯ : ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ ಅಮೆರಿಕಾದ ಹುಡುಗಿ ಮೇಲೆ ಅತ್ಯಾಚಾರ…
ಫೇಸ್ ಬುಕ್ ನಲ್ಲಿ ಪರಿಚಿತನಾದ ಸ್ನೇಹಿತನ ಭೇಟಿ ಮಾಡುವ ಸಲುವಾಗಿ ಅಮೆರಿಕಾದ ಹುಡುಗಿ ಪಾಕಿಸ್ತಾನಕ್ಕೆ ತೆರಳಿದ್ದಳು. ಆದ್ರೆ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ..
ಪಾಕಿಸ್ತಾನಕ್ಕೆ ತೆಳಿದ್ದ 21 ವರ್ಷದ ಅಮೆರಿಕದ ಯುವತಿಯ ಮೇಲೆ ಇಬ್ಬರು ಕೀಚಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ…
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಫೋರ್ಟ್ ಮನ್ರೋ ಗಿರಿಧಾಮದಲ್ಲಿರುವ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.
ತನ್ನದೇ ಫೇಸ್ ಬುಕ್ ಪೇಜ್ ನಡೆಸುತ್ತಿದ್ದ ಟಿಕ್ ಟಾಕರ್ ಫೇಸ್ ಬುಕ್‌ನಿಂದ ಪರಿಚಯವಾದ ಮುಜಾಮಿಲ್ ಸಿಪ್ರಾ ಮತ್ತು ಅಜಾನ್ ಖೋಸಾ ಅವರನ್ನು ಭೇಟಿ ಮಾಡಲು ತೆಳಿದ್ದರು ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಖಾನ್ ಜಿಲ್ಲೆಯ ಪೊಲೀಸ್ ಆಯುಕ್ತ ಅನ್ವರ್ ಬಾರ್ಯಾರ್, ಅಮೆರಿಕದ ಯುವತಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ಮುಜ್ಮಲ್ ಸಿಪ್ರಾ ಆಹ್ವಾನದ ಮೇರೆಗೆ ಕರಾಚಿಯಿಂದ ಫೋರ್ಟ್ ಮನ್ರೋಗೆ ಬಂದಿದ್ದಳು. ಲಾಹೋರ್‌ನಿಂದ 550 ಕಿಲೋಮೀಟರ್ ದೂರದಲ್ಲಿರುವ ಪಂಜಾಬ್‌ನ ರಾಜನ್‌ಪುರ ಜಿಲ್ಲೆಯಲ್ಲಿನ ಅವರ ಮನೆಗೆ ಭೇಟಿ ನೀಡಿದ್ದಳು. ಪಾಕಿಸ್ತಾನ ಪ್ರವಾಸದಲ್ಲಿದ್ದ ಯುವತಿ ಕಳೆದ 7 ತಿಂಗಳಿನಿಂದಲೂ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ.
ಸಂತ್ರಸ್ತೆ ಫೋರ್ಟ್ ಮನ್ರೋ ಗಿರಿಧಾಮದಲ್ಲಿನ ಹೋಟೆಲ್‌ಗೆ ಭೇಟಿ ಮಾಡಿದಾಗ ಯುವತಿ ಅಲ್ಲಿಯೇ ಸಿಪ್ರಾ ಹಾಗೂ ಖೋಸಾರೊಂದಿಗೆ ಟಿಕ್‌ಟಾಕ್ ಮಾಡಿದ್ದಾರೆ. ಇದೇ ವೇಳೆ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಬ್ಲ್ಯಾಕ್‌ಮೇಲ್ ಮಾಡಲು ಕೃತ್ಯದ ವೀಡಿಯೋವನ್ನೂ ಮಾಡಿಕೊಂಡಿರೋದಾಗಿ ಆಕೆ ದೂರಿನಲ್ಲಿ ಉಲ್ಲೇಖಿಸಿರೋದಾಗಿ ವರದಿಯಾಗಿದೆ..








