ಏರ್ ಶೋ ರಿಹರ್ಸಲ್ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿತ್ತು. ಆನಂತರ, ಇದೀಗ ಆಹಾರದಲ್ಲಿ ಹುಳ ಪತ್ತೆಯಾಗಿದೆ.
ಆದರೆ, ರಿಹರ್ಸಲ್ ಸಮಯದಲ್ಲಿ ಮತ್ತು ನಿನ್ನೆ ಪೊಲೀಸರಿಗೆ ಪೂರೈಸಿದ ಊಟದಲ್ಲಿ ಜಿರಳೆ ಮತ್ತು ಹುಳ ಪತ್ತೆಯಾದ ಘಟನೆ ಪೊಲೀಸರು ಹಾಗೂ ಸಿಬ್ಬಂದಿಗಳಲ್ಲಿ ಆಕ್ರೋಶವನ್ನು ಹುಟ್ಟಿಸಿದೆ. ಗುಣಮಟ್ಟ ಮತ್ತು ಶುಚಿತ್ವ ಇಲ್ಲದ ಆಹಾರವನ್ನು ತಮ್ಮ ತಂಡಕ್ಕೆ ನೀಡಲಾಗಿದೆ ಎಂಬ ಕಾರಣಕ್ಕಾಗಿ, ಹಲವರು ಊಟ ತಿನ್ನದೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಅಹಿತಕರ ಸ್ಥಿತಿಯ ನಡುವೆಯೂ, ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಣೆ ಮುಂದುವರಿಸಿದ್ದು, ಆಹಾರದ ಗುಣಮಟ್ಟದ ಮೇಲ್ವಿಚಾರಣೆ ಮಾಡಲು ಉನ್ನತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.








