ಕೋವಿಡ್ ಬೆನ್ನಲ್ಲೇ ದೇಶದಲ್ಲಿ ಆಫ್ರಿಕನ್ ಹಂದಿಜ್ವರದ ಭೀತಿ : ಮೊದಲ ಕೇಸ್ ಪತ್ತೆ…
ಉತ್ತರಪ್ರದೇಶ : ಒಂದೆಡೆ ದೇಶದಲ್ಲಿ ಕೋವಿಡ್ ಆತಣಕ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.. ಮತ್ತೊಂದೆಡೆ ಕೇರಳದಲ್ಲಿ 22 ಮಂಕಿ ಪಾಕ್ಸ್ ಪ್ರಕರಣಗಳು ಬೇರೆ ಪತ್ತೆಯಾಗಿದೆ.. ಇದೀಗ
ದೇಶದಲ್ಲೇ ಮೊದಲ ಬಾರಿಗೆ ಆಫ್ರಿಕನ್ ಹಂದಿ ಜ್ವರದ ಪ್ರಜರಣ ಪತ್ತೆಯಾಗಿದ್ದು ಜನರ ಆತಂಕ ಹೆಚ್ಚಿಸಿದೆ. ಫತೇಪುರ್ ವ್ಯಕ್ತಿಯೊಬ್ಬರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಕಾನ್ಪುರದ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 10 ದಿನಗಳಿಂದಲೂ ಈತ ತಲೆನೋವು, ಕೆಮ್ಮು, ನೆಗಡಿ, ಜ್ವರ ಹಾಗೂ ಬೆನ್ನು ನೋವಿನಿಂದ ಬಳಲುತ್ತಿದ್ದ. ತಪಾಸಣೆಗೆ ಒಳಪಡಿಸಿದಾಗ ಆಫ್ರಿಕನ್ ಹಂದಿಜ್ವರ ಇರುವುದು ಪತ್ತೆಯಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅಲೋಕ್ ರಂಜನ್ ತಿಳಿಸಿದ್ದಾರೆ.
ಸದ್ಯ ಸೋಂಕು ವರದಿಯಾದ ವ್ಯಕ್ತಿ ಮತ್ತು ಆತನ ಕುಟುಂಬವನ್ನು ಪ್ರತ್ಯೇಕಿಸಲಾಗಿದ್ದು, ಹೊರಗೆ ತಿರುಗಾಡದಂತೆ ಸೂಚಿಸಿದ್ದಾರೆ.
ಈ ಹಿಂದೆ ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿತ್ತು.. ಹಂದಿ ಮಾಂಸ ಸೇವಿಸದಂತೆ ಅಸ್ಸಾಂ ಸರ್ಕಾರ ಸೂಚಿಸಿತ್ತು. ಅಲ್ಲದೆ ಆಫ್ರಿಕನ್ ಹಂದಿಜ್ವರ ಪತ್ತೆಯಾದ ಆ ಪ್ರದೇಶದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿತ್ತು.








