ನ್ಯೂಜಿಲೆಂಡ್‌ ನಲ್ಲಿ ಮತ್ತೆ ಭೂಕಂಪ : 2 ದಿನಗಳಲ್ಲಿ 4ನೇ ಬಾರಿಗೆ ಕಂಪಿಸಿದ ಭೂಮಿ..!

1 min read
Jammu and Kashmir: earthquake hits Gulmarg

ನ್ಯೂಜಿಲೆಂಡ್‌ ನಲ್ಲಿ ಮತ್ತೆ ಭೂಕಂಪ : 2 ದಿನಗಳಲ್ಲಿ 4ನೇ ಬಾರಿಗೆ ಕಂಪಿಸಿದ ಭೂಮಿ..!

ನ್ಯೂಜಿಲೆಂಡ್‌ : ನ್ಯೂಜಿಲೆಂಡ್‌ ನಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಗ್ತಲೇ ಇದೆ.  ಇದಕ್ಕೂ ಮೊದಲು ಸಂಭವಿಸಿದ ನಡುಕಗಳಲ್ಲಿ 7.4 ಹಾಗೂ 7.3 ತೀವ್ರತೆಯ ಭೂಕಂಪನಗಳು ದಾಖಲಾಗಿದ್ದವು.  ಶುಕ್ರವಾರದಂದು ನ್ಯೂಜಿಲೆಂಡ್‌ನ ಈಶಾನ್ಯಕ್ಕೆ ದಕ್ಷಿಣ ಪೆಸಿಫಿಕ್‌ನಲ್ಲಿ 1,000 ಕಿ.ಮೀ. ದೂರದಲ್ಲಿ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ 8.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಪರಿಣಾಮ 11 ಮೀಟರ್ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

ಹೊಸ ಕಾರುಗಳಲ್ಲಿ ಡ್ಯುಯಲ್‌ ಏರ್‌ ಬ್ಯಾಗ್‌ ಕಡ್ಡಾಯ – ಕೇಂದ್ರದ ಆದೇಶ..!

ಭೂಕಂಪನ ಉಂಟಾಗಿದ್ದು, ಶನಿವಾರದಂದು ರಿಕ್ಟರ್ ಮಾಪನದಲ್ಲಿ 6.4 ತೀವ್ರತೆ ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ. ಈ ಬಾರಿ ನ್ಯೂಜಿಲೆಂಡ್‌ ನ ಉತ್ತರ ದ್ವೀಪದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದಿಂದ ಯಾವುದೇ ಗಂಭೀರವಾದ ಹಾನಿ ಅಥವಾ ಗಾಯದ ಬಗ್ಗೆ ವರದಿಯಾಗಿಲ್ಲ. ಗಿಸ್ಬೋರ್ನ್ ಕಚಲಾಚೆಯ ಮೇಲೆ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಇದೀಗ 2 ದಿನಗಳಲ್ಲಿ ನಾಲ್ಕನೇ ಬಾರಿ ಸಂಭವಿಸಿದ ಭೂಕಂಪನ ಸಂಭವಿಸಿದ್ದು, ಭೂಕಂಪದ ತೀವ್ರತೆ 6.3 ಮ್ಯಾಗ್ನಿಟ್ಯೂಡ್‌ನಷ್ಟಿತ್ತು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ಮಾರ್ಚ್ 05ರಂದು ಮೂರು ಬಾರಿ ಒಂದೇ ಜಾಗದಲ್ಲಿ ಭೂಕಂಪ ಸಂಭವಿಸಿತ್ತು. ಮಾಧ್ಯಮಗಳ ವರದಿ ಪ್ರಕಾರ, 8.1 ತೀವ್ರತೆಯ ಭೂಕಂಪದಿಂದ ಉದ್ಭವಿಸಿದ ಸುನಾಮಿ ಸುಮಾರು 10 ಅಡಿ ಎತ್ತರ ಇತ್ತು ಎನ್ನಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜನರನ್ನ ಎತ್ತರದ ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ. ಜೊತಗೆ ಸಹಾಯವಾಣಿಯನ್ನೂ ತೆರೆಯಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd