Thursday, June 8, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

“ಸಾವಯವ ಟಾಸ್ಕ್ ಪೋರ್ಸ್’’ ರಚಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ

admin by admin
July 31, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

“ಸಾವಯವ ಟಾಸ್ಕ್ ಪೋರ್ಸ್’’ ರಚಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ

ನಗರದ ಕೃಷಿ ಆಯುಕ್ತರ ಕಚೇರಿಯಲ್ಲಿ ರಾಜ್ಯ ಮಟ್ಟದ ಸಾವಯವ ಕೃಷಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿ ಅಧ್ಯಕ್ಷರಾದ ಆನಂದ್ ಉಪ್ಪಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
2004ರಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಸಾವಯವ ಕೃಷಿ ನೀತಿಯನ್ನು ಕರ್ನಾಟಕ ಸರ್ಕಾರವ ಹೊರತಂದಿದ್ದು ಇದರ ಪರಿಣಾಮವಾಗಿ ರಾಜ್ಯದಲ್ಲಿ ಹಲವಾರು ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳ ಅನುಷ್ಠಾನದಿಂದ ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಿ ಸಾವಯವ ವಿಸ್ತಿರ್ಣವನ್ನುಸುಮಾರು1.00ಲಕ್ಷ ಹೆಕ್ಟೇರ್ ಗಳಿಗೆ ವಿಸ್ತರಿಸಲಾಗಿದೆ. 2017ರಲ್ಲಿ ಸಾವಯವ ಕೃಷಿ ನೀತಿಯನ್ನು ಪರಿಷ್ಕರಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸದರಿ ನೀತಿಯನ್ನು ಮತ್ತಷ್ಟು ಉತ್ತೇಜಿತ ಕಾರ್ಯಕ್ರಮಗಳನ್ನೊಳಗೊಂಡಂತೆ ದೇಶಕ್ಕೆ ಮಾದರಿಯಾಗುವಂತಹ ಸಮಗ್ರ ಸಾವಯವ ಕೃಷಿ ನೀತಿಯನ್ನು ಹೊರತರಬೇಕು ಎಂದರು.
ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ “ಬೆಂಗಳೂರು ಸಾವಯಕ ಕೃಷಿ ರಾಜಧಾನಿ” ಎಂದು ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ “ಕರ್ನಾಟಕವೇ ದೇಶದ ಸಾವಯವ ರಾಜಧಾನಿ” ಎನ್ನುವಂತಾಗಬೇಕು. ಈ ನಿಟ್ಟಿನಲ್ಲಿ ಒಂದು ಕಾರ್ಯಪಡೆ ಸಮಿತಿ ರಚಿಸುವಂತೆ ಬಿ.ಸಿ.ಪಾಟೀಲರು ಸೂಚಿಸಿದರು.
ಸಿರಿಧಾನ್ಯ ರೈತ ಸಿರಿಧಾನ್ಯ ಯೋಜನೆ ಯಶಸ್ವಿಯಾಗಿದ್ದು, ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ದೇಶೀಯ ಸ್ಥಳೀಯ ಔಷಧಿಭರಿತ ಸಿರಿಧಾನ್ಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು.ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶವನ್ನು ವಿಸ್ತರಿಸುವ ಜೊತೆಗೆ ಸಿರಿಧಾನ್ಯಗಳ ಸಂಸ್ಕರಣೆಗೆ ಹೆಚ್ಚಿನ ಒತ್ತುಕೊಡವ ಕಾರ್ಯಕ್ರಮಗಳನ್ನು ರೂಪಿಸಬೇಕು. ಅಲ್ಲದೇ ಉತ್ಪಾದಿಸಿದ ಸಿರಿಧಾನ್ಯಗಳ ಉತ್ಪನ್ನಗಳನ್ನು ಸರ್ಕಾರದ ಯೋಜನೆಗಳಾದ ಮಧ್ಯಾೂಹ್ನದ ಬಿಸಿಊಟ, ಸಾರ್ವಜನಿಕ ವಿತರಣಾವ್ಯವಸ್ಥೆ, ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುವ ಆಹಾರಗಳು ಮುಂತಾದ ಕಾರ್ಯಕ್ರಮಗಳಡಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲು ಸಭೆಯಲ್ಲಿ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿದರು.
ಆನಂದ್ ಉಪ್ಪಳ್ಳಿ ಮಾತನಾಡಿ, 2004-05 ನಲ್ಲಿ ಸಾವಯವ ಹೊಸ ಸಾವಯವ ನೀತಿ ಜಾರಿಯಾಗಿದ್ದು, 2017 ರಲ್ಲಿ ನೀತಿಯನ್ನು ಪರಿಷ್ಕರಿಸಲಾಗಿದ್ದು,ಈ ನಿಟ್ಟಿನಲ್ಲಿ ಸಾವಯವ ಕೃಷಿಯನ್ನು ಬೃಹತ್ ಮಟ್ಟದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ರೂಪುರೇಷೆ ತಯಾರಿಸಬೇಕು. ಇದಕ್ಕಾಗಿ“ಸಾವಯವ ಟಾಸ್ಕ್ ಪೋರ್ಸ್’’ ರಚಿಸಬೇಕು ಎಂದರು.
ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಧುನಿಕ ಸಾವಯವ ತಾಂತ್ರಿಕತೆಗಳನ್ನು ಒಳಗೊಂಡ ಪ್ರಾತ್ಯಕ್ಷಿತೆಗಳನ್ನು ಮಾದರಿ ಕ್ಷೇತ್ರಗಳನ್ನಾಗಿ ಅಭಿವೃದ್ದಿಪಡಿಸಬೇಕು.ಸಾವಯವ ಉತ್ಫನ್ನಗಳ ಪ್ಯಾಕಿಂಗ್ನಲ್ಲಿ ಉತ್ಪಾದಕರ ಹೆಸರು, ಸರ್ವೇ ನಂ., ಉತ್ಪಾದನಾಪ್ರಮಾಣ, ಖರೀದಿ ಪ್ರಮಾಣಗಳ ಮಾಹಿತಿಗಳನ್ನು ಮುದ್ರಿಸಲು ನಿರ್ಣಯಿಸಲಾಯಿತು. ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶವನ್ನು ವಿಸ್ತರಿಸುವ ಜೊತೆಗೆ ಸಿರಿಧಾನ್ಯಗಳ ಸಂಸ್ಕರಣೆಗೆ ಹೆಚ್ಚಿನಒತ್ತುಕೊಡವ ಕಾರ್ಯಕ್ರಮಗಳನ್ನು ರೂಪಿಸಲು ತೀರ್ಮಾನಿಸಲಾಯಿತು.. ಹಾಗೂ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಹೆಚ್ಚಿನ ಪ್ರಚಾರ ಒದಗಿಸುವ ಸಲುವಾಗಿ “ಸಾವಯವಮಾತುಕತೆ” ಎಂಬ ಪ್ರಾಯೋಜಿತ ಕಾರ್ಯಕ್ರಮವನ್ನು ಆಕಾಶವಾಣಿ ಮುಖಾಂತರ ರಾಜ್ಯ ವ್ಯಾಪ್ತಿ ಬಿತ್ತರಿಸುವ ನಿರ್ಣಯ ಕೈಗೊಳ್ಳಲಾಯಿತು..
.ರೈತ ಸಿರಿ ಯೋಜನೆಯಡಿ ಸಿರಿಧಾನ್ಯಗಳ ಜೊತೆಗೆ ಸ್ಥಳೀಯವಾಗಿ ಹಾಗೂ ವಿರಳವಾಗಿ ಬೆಳೆಯುವ
ಔಷಧೀಯ ಗುಣಗಳುಳ್ಳ ಹಾಗೂ ಹೆಚ್ಚಿನ ಪೌಷ್ಠಿಕಭರಿತ ದೇಶಿ ಭತ್ತ ಹಾಗೂ ಇನ್ನಿತರ ಬೆಳೆಗಳನ್ನು ಸೇರ್ಪಡಿಸುವ ಅವಶ್ಯಕತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಒಕ್ಕೂಟಗಳಿಂದ ಉತ್ಪಾದಿಸಿದ ಉತ್ಪನ್ನಗಳನ್ನು ಇಲಾಖೆಯಿಂದ ಹೊರತರಲಾಗಿರುವ ಬ್ರ್ಯಾಂಡ್ಗಳ ಹೆಸರಿನಲ್ಲಿ ಮಾರಾಟ ಮಾಡಲು ತಿಳಿಸಲಾಯಿತು ಹಾಗೂ ಉತ್ಪನ್ನಗಳ ಪ್ಯಾಕೆಟ್ ಗಳ ಮೇಲೆ ಉತ್ಪಾದಕರ ಹೆಸರು, ಸರ್ವೇ ನಂ., ಉತ್ಪಾದನಾ ಪ್ರಮಾಣ, ಖರೀದಿ ಪ್ರಮಾಣಗಳ ಮಾಹಿತಿಗಳನ್ನು ಮುದ್ರಿಸಿ ಮಾರಾಟಮಾಡಲು ಕ್ರಮಕೈಗೊಳ್ಳಲು ಎಲ್ಲಾ ಒಕ್ಕೂಟಗಳಿಗೆ ನಿರ್ದೇಶಿಸಲಾಯಿತು.

Related posts

WTC Final: ಭಾರತದ ಬೌಲರ್‌ಗಳ ಬೆವರಿಳಿಸಿದ ಹೆಡ್‌: ಅದ್ಭುತ ಶತಕ ದಾಖಲಿಸಿ ಅಬ್ಬರ

WTC Final: 111 ವರ್ಷಗಳ ಹಿಂದಿನ ದಾಖಲೆ ಮುರಿದ ಸ್ಮಿತ್‌-ಹೆಡ್‌ ಜೋಡಿ!

June 8, 2023
WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ಮುನ್ನಡೆ

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ಮುನ್ನಡೆ

June 7, 2023
ShareTweetSendShare
Join us on:

Related Posts

WTC Final: ಭಾರತದ ಬೌಲರ್‌ಗಳ ಬೆವರಿಳಿಸಿದ ಹೆಡ್‌: ಅದ್ಭುತ ಶತಕ ದಾಖಲಿಸಿ ಅಬ್ಬರ

WTC Final: 111 ವರ್ಷಗಳ ಹಿಂದಿನ ದಾಖಲೆ ಮುರಿದ ಸ್ಮಿತ್‌-ಹೆಡ್‌ ಜೋಡಿ!

by Honnappa Lakkammanavar
June 8, 2023
0

ಅನುಭವಿ ಬ್ಯಾಟರ್‌ ಸ್ಟೀವ್‌ ಸ್ಮಿತ್‌(95*) ಹಾಗೂ ಟ್ರಾವಿಸ್‌ ಹೆಡ್‌(146*) ಅವರ ಅಮೋಘ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಭಾರತ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್ಷಿಪ್‌ ಫೈನಲ್‌ನ ಮೊದಲ ದಿನದಾಟದಲ್ಲಿ...

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ಮುನ್ನಡೆ

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ಮುನ್ನಡೆ

by Honnappa Lakkammanavar
June 7, 2023
0

ಟೀಂ ಇಂಡಿಯಾ ಬೌಲರ್‌ಗಳ ಆರಂಭಿಕ ಮೇಲುಗೈ ನಡುವೆಯೂ ಸ್ಟೀವ್‌ ಸ್ಮಿತ್‌(95*) ಹಾಗೂ ಟ್ರಾವಿಸ್‌ ಹೆಡ್‌(146*) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ವಿಶ್ವ ಟೆಸ್ಟ್‌ ಚಾಂಪಿಯನ್ಷಿಪ್‌ ಫೈನಲ್‌ ಪಂದ್ಯದಲ್ಲಿ...

AFG v SL: ಶ್ರೀಲಂಕಾ ಬೌಲಿಂಗ್‌ ದಾಳಿಗೆ ಆಫ್ಘಾನ್‌ ತತ್ತರ: ಅತಿಥೇಯರ ಮಡಿಲಿಗೆ ODI ಸರಣಿ

AFG v SL: ಶ್ರೀಲಂಕಾ ಬೌಲಿಂಗ್‌ ದಾಳಿಗೆ ಆಫ್ಘಾನ್‌ ತತ್ತರ: ಅತಿಥೇಯರ ಮಡಿಲಿಗೆ ODI ಸರಣಿ

by Honnappa Lakkammanavar
June 7, 2023
0

ದುಶ್ಮಂತ ಚಮೀರ(4/63) ಹಾಗೂ ವನಿಂದು ಹಸರಂಗ(3/7) ಅವರ ಆಕ್ರಮಣಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಪ್ರವಾಸಿ ಆಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟ್‌ಗಳ ಭರ್ಜರಿ...

WTC Final: ಭಾರತದ ಬೌಲರ್‌ಗಳ ಬೆವರಿಳಿಸಿದ ಹೆಡ್‌: ಅದ್ಭುತ ಶತಕ ದಾಖಲಿಸಿ ಅಬ್ಬರ

WTC Final: ಭಾರತದ ಬೌಲರ್‌ಗಳ ಬೆವರಿಳಿಸಿದ ಹೆಡ್‌: ಅದ್ಭುತ ಶತಕ ದಾಖಲಿಸಿ ಅಬ್ಬರ

by Honnappa Lakkammanavar
June 7, 2023
0

ಟೀಂ ಇಂಡಿಯಾದ ವೇಗದ ಬೌಲರ್‌ಗಳ ಪ್ರಾಬಲ್ಯದ ನಡುವೆಯೂ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಟ್ರಾವಿಸ್‌ ಹೆಡ್‌ ಭರ್ಜರಿ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಆಸರೆಯಾದರಲ್ಲದೆ, ಐಸಿಸಿ ವಿಶ್ವ ಟೆಸ್ಟ್‌...

WTC Final: ಒಡಿಶಾ ರೈಲು ದುರಂತ:  ಭಾರತ-ಆಸೀಸ್‌ ಆಟಗಾರರಿಂದ ಶ್ರದ್ಧಾಂಜಲಿ!

WTC Final: ಒಡಿಶಾ ರೈಲು ದುರಂತ: ಭಾರತ-ಆಸೀಸ್‌ ಆಟಗಾರರಿಂದ ಶ್ರದ್ಧಾಂಜಲಿ!

by Honnappa Lakkammanavar
June 7, 2023
0

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್ಷಿಪ್‌ ಫೈನಲ್‌ ಪಂದ್ಯಕ್ಕೆ ಭರ್ಜರಿ ಆರಂಭ ಲಭಿಸಿದ್ದು, ಐತಿಹಾಸಿಕ ಪಂದ್ಯದ ಮೊದಲ ದಿನದಾಟ ಹಲವು ವಿಶೇಷ ಸನ್ನಿವೇಶಗಳಿಗೆ ಸಾಕ್ಷಿಯಾಯಿತು....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಕೊಲ್ಲಾಪುರದಲ್ಲಿ ಹಿಂಸಾರೂಪಕ್ಕೆ ತಾಳಿದ ಪ್ರತಿಭಟನೆ; ರಾಜ್ಯದಲ್ಲೂ ಅಲರ್ಟ್!

ಕೊಲ್ಲಾಪುರದಲ್ಲಿ ಹಿಂಸಾರೂಪಕ್ಕೆ ತಾಳಿದ ಪ್ರತಿಭಟನೆ; ರಾಜ್ಯದಲ್ಲೂ ಅಲರ್ಟ್!

June 8, 2023
ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆ ಕೊಲೆ ಮಾಡಿ, ಪೀಸ್ ಪೀಸ್ ಮಾಡಿದ ವ್ಯಕ್ತಿ

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆ ಕೊಲೆ ಮಾಡಿ, ಪೀಸ್ ಪೀಸ್ ಮಾಡಿದ ವ್ಯಕ್ತಿ

June 8, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram