Air Gun Championship : ಚಿನ್ನದ ಪದಕಗಳನ್ನ ಭೇಟೆಯಾಡಿದ ಭಾರತ…
ಏಷ್ಯನ್ ಏರ್ಗನ್ ಚಾಂಪಿಯನ್ಶಿಪ್ನಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿದ ಭಾರತ 25 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಟೂರ್ನಿಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಶುಕ್ರವಾರ ಕೊರಿಯಾಸ ಡೆಗುವಿನಲ್ಲಿ ನಡೆದ ಕೊನೆಯ ದಿನ 10ಮೀ. ಪಿಸ್ತೂಲ್ ಮಿಶ್ರ ತಂಡದ ಜೂನಿಯರ್ ವಿಭಾಗದಲ್ಲಿ ಮನು ಬಾಕರ್ ಮತ್ತು ಸಮರ್ಥ್ ರಾಣಾ ಚಿನ್ನ ಗೆದ್ದರು. ಹಿರಿಯರ ವಿಭಾಗದಲ್ಲಿ ಸಾಂಗ್ವಾನ್ ಮತ್ತು ವಿಜಯ್ವೀರ್ ಸಿಂಗ್ ಕೂಡ ಚಿನ್ನಕ್ಕೆ ಮುತ್ತಿಟ್ಟರು.
ಎಂಟು ದಿನಗಳ ಕಾಲ ನಡೆದ ಶೂಟಿಂಗ್ನಲ್ಲಿ ಭಾರತ 28 ವಿಭಾಗಗಳಲ್ಲಿ 25 ವಿಭಾಗಗಳನ್ನು ಗೆದ್ದುಕೊಂಡಿತು.
ಏರ್ ಪಿಸ್ತೂಲ್ ಮಿಶ್ರ ತಂಡ ಫೈನಲ್ನಲ್ಲಿ ಸಾಂಗ್ವಾನ್ ಹಾಗೂ ಸಿಂಗ್ ಜೋಡಿ ಕಜಕಿಸ್ತಾನದ ರಾಖಿಮ್ಜಾನ್ ಮತ್ತು ಲಿರಿನಾ ಯುನುಸ್ಮೆಟೊವಾ ವಿರುದ್ಧ 17-3 ಅಂಕಗಳಿಂದ ಗೆದ್ದುಕೊಂಡಿತು.
Air Gun Championship: India hunted for gold medals…








