ಲಂಡನ್: ಏರ್ ಇಂಡಿಯಾ (Air India) ಸಿಬ್ಬಂದಿಯ ಮೇಲೆ ಲಂಡನ್ ನ ಹೋಟೆಲ್ ನಲ್ಲಿ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ.
ಪ್ರಮುಖ ಅಂತಾರಾಷ್ಟ್ರೀಯ ಹೋಟೆಲ್ ನಲ್ಲಿ ಯಾರೋ ಅಕ್ರಮವಾಗಿ ಒಳನುಗ್ಗಿ ಹಲ್ಲೆ ನಡೆಸಿರುವ ಕುರಿತು ಬೇಸರ ಹೊರಹಾಕಿರುವ ಏರ್‌ಲೈನ್ಸ್, ವೃತ್ತಿಪರ ಸಮಾಲೋಚನೆ ಸೇರಿದಂತೆ ನಮ್ಮ ಸಹೋದ್ಯೋಗಿ ಮತ್ತು ಅವರ ತಂಡಕ್ಕೆ ನಾವು ಸಾಧ್ಯವಿರುವ ಎಲ್ಲ ಬೆಂಬಲ ಒದಗಿಸುತ್ತೇವೆ ಎಂದು ಹೇಳಿದೆ.
ಈ ಕುರಿತು ಲಂಡನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಸಿಬ್ಬಂದಿಯ ಗೌಪ್ಯತೆಯನ್ನು ಗೌರವಿಸಬೇಕು ಎಂದು ಏರ್ ಇಂಡಿಯಾ ವಿನಂತಿಸಿದೆ. ಘಟನೆಯ ಕೂಲಂಕಷ ತನಿಖೆ ಬಗ್ಗೆ ಕ್ರಮವಹಿಸಿರುವ ಬಗ್ಗೆಯೂ ಏರ್‌ಲೈನ್ಸ್ ಮಾಹಿತಿ ನೀಡಿದ್ದು, ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ವರದಿಗಳ ಕುರಿತು ವಿಮಾನಯಾನ ಸಂಸ್ಥೆಯು ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.








