Air India ಗೆ 988 ಕೋಟಿ ಮರುಪಾವತಿ , ದಂಡ ವಿಧಿಸಿದ ಅಮೆರಿಕ
ಟಾಟಾ ಗ್ರೂಪ್ಸ್ ಒಡೆತನದ ಏರ್ ಇಂಡಿಯಾಗೆ ಮರುಪಾತಿ ಹಾಗೂ ದಂಡವಾಗಿ ಅಮೆರಿಕ 121.5 ಮಿಲಿಯನ್ ಡಾಲರ್ ಅಂದ್ರೆ ಸುಮಾರು 988 ಕೋಟಿ ರೂ. ದಂಡ ವಿಧಿಸಿದೆ.
ಈ ಮೂಲಕ ಏರ್ ಇಂಡಿಯಾಗೆ ಭಾರೀ ನಷ್ಟವಾಗಲಿದೆ.. ಕೋವಿಡ್ ಸಾಂಕ್ರಾಮಿಕ ವೇಳೆಯಲ್ಲಿ ಸಾಕಷ್ಟು ಬಾರಿ ವಿಮಾನ ರದ್ದತಿ ಹಾಗೂ ವಿಮಾನ ಬದಲಾವಣೆ ಮಾಡಿರುವ ಹಿನ್ನೆಲೆ ಏರ್ ಇಂಡಿಯಾ ಸೇರಿದಂತೆ ಒಟ್ಟು 6 ವಿಮಾನಯಾನ ಸಂಸ್ಥೆಗಳಿಗೆ ಅಮೆರಿಕ ಒಟ್ಟು 600 ಮಿಲಿಯನ್ ಡಾಲರ್ ಮರುಪಾವತಿ ಮಾಡುವಂತೆ ಹೇಳಿದೆ.
ಏರ್ ಇಂಡಿಯಾ ರದ್ದುಗೊಳಿಸಿದ ಹಾಗೂ ವಿಮಾನಗಳನ್ನು ಬದಲಿಸಿದ ಕಾರಣಕ್ಕೆ ಸಲ್ಲಿಸಲಾದ 1,900 ಮರುಪಾವತಿ ದೂರುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವುಗಳಿಗೆ ಪ್ರತಿಕ್ರಿಯಿಸಲು 100ಕ್ಕೂ ಹೆಚ್ಚು ದಿನಗಳನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ..
ಗ್ರಾಹಕರಿಗೆ ಮರುಪಾವತಿ ಮಾಡುವಲ್ಲಿ ತೀವ್ರವಾದ ವಿಳಂಬ ಮಾಡಿರುವುದರಿಂದ ಅವರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಹೀಗಾಗಿ ಸಂಸ್ಥೆಗೆ ದಂಡ ವಿಧಿಸಿರುವುದಾಗಿ ಅಮೆರಿಕದ ಸಾರಿಗೆ ಇಲಾಖೆ ತಿಳಿಸಿದೆ.