ದೆಹಲಿಯಲ್ಲಿ ಗಾಳಿಯ ಮಟ್ಟ ಕುಸಿತಿದ್ದು, ಶಾಲೆಗಳಿಗೆ ಸರ್ಕಾರವು ಅವಧಿಗೂ ಮುನ್ನವೇ ರಜೆ ಘೋಷಿಸಿದೆ.
ಅಲ್ಲಿನ ಶಾಲೆಗಳಿಗೆ ಸರ್ಕಾರವು ನವೆಂಬರ್ 9 ರಿಂದ 18 ರ ವರೆಗೆ ರಜೆ ಘೋಷಿಸಿದೆ. ಡಿಸೆಂಬರ್ನಲ್ಲಿ ತುಂಬಾ ಚಳಿ ಇರುವ ಕಾರಣ ಒಂದು ವಾರಗಳ ಕಾಲ ಚಳಿಗಾಲದ ರಜೆ ನೀಡಲಾಗುತ್ತಿತ್ತು. ಈಗ ತೀರಾ ಕಳಪೆಯಾಗಿರುವುದರಿಂದಾಗಿ ನ.9ರಿಂದಲೇ ರಜೆ ಘೋಷಿಸಲಾಗಿದೆ.
ಆನಂದ್ ವಿಹಾರ್ನಲ್ಲಿ ಎಕ್ಯೂಐ 452, ಆರ್ಕೆ ಪುರಂನಲ್ಲಿ 433, ಪಂಜಾಬಿ ಬಾಗ್ನಲ್ಲಿ 460 ಮತ್ತು ಐಟಿಒದಲ್ಲಿ 413 ಇದೆ ದು ತಿಳಿದು ಬಂದಿದೆ. ಹೀಗಾಗಿ 10 ಹಾಗೂ 12ನೇ ತರಗತಿಗಳನ್ನು ಹೊರತುಪಡಿಸಿ ದೈಹಿಕ ತರಗತಿಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿಯಲ್ಲಿ ವಾತಾವರಣ ಹದಗೆಟ್ಟಿರುವುದಕ್ಕೆ ತೀವ್ರ ಆತಂಕ ವ್ಯಕ್ತವಾಗುತ್ತಿದೆ.