ವಾಷಿಂಗ್ಟನ್: ಇರಾಕ್ ಇರಾಕ್ (Iraq) ಹಾಗೂ ಸಿರಿಯಾದಲ್ಲಿ (Syria) ಅಮೆರಿಕ ವೈಮಾನಿಕ ದಾಳಿ ನಡೆಸಿದ್ದು, 40 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇರಾನ್ ಬೆಂಬಲಿತ ಉಗ್ರಗಾಮಿಗಳಿಂದ ಜೋರ್ಡಾನ್‌ನಲ್ಲಿ ನಡೆದ ದಾಳಿಗೆ ಪ್ರತಿದಾಳಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗಿದೆ. ಪ್ಯಾಲೆಸ್ತೀನಿಯನ್ ಗುಂಪು ಹಮಾಸ್ ಶನಿವಾರ ಇರಾಕ್ ಮತ್ತು ಸಿರಿಯಾ ಮೆಲೆ ಅಮೆರಿಕ ನಡೆಸಿದ ದಾಳಿಗಳನ್ನು ಖಂಡಿಸಿದ್ದು, ವಾಷಿಂಗ್ಟನ್ ಮಧ್ಯಪ್ರಾಚ್ಯದಲ್ಲಿ “ಬೆಂಕಿಯ ಮೇಲೆ ಎಣ್ಣೆ” ಸುರಿದಿದೆ ಎಂದು ಹೇಳಿದೆ.
ಸಿರಿಯಾ ಮತ್ತು ಇರಾಕ್‌ನ ಏಳು ವ್ಯಾಪ್ತಿಗಳಲ್ಲಿನ 85 ಪ್ರದೇಶಗಳ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಸಿರಿಯಾದಲ್ಲಿ ಕನಿಷ್ಠ 23 ಇರಾನ್ ಪರ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇರಾಕ್ ನಲ್ಲಿ ನಾಗರಿಕರು ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.