Airtail Recharge Rate Increase -ಗ್ರಾಹಕರಿ ಬಿಸಿ ಮುಟ್ಟಿಸಲು ಸಜ್ಜಾಗಿರುವ ಟೆಲಿಕಾಂ ಕಂಪನಿಗಳು ಇಗ ಗ್ರಾಹಕರಿಗೆ ಶಾಕ್ ನೀಡಿವೆ
ಹೌದು ಟೆಲಿಕಾಂ ಕಂಪನಿಗಳು ರೀಚಾರ್ಜ ದರಗಳನ್ನು ಏರಿಸುವ ಸಾಧ್ಯತೆ ಇದೆ ಈಗಾಗಲೇ ಏರ್ಟೆಲ್ ಕಂಪನಿ ಎರಡು ಮಾದರಿಯಲ್ಲಿ ಶೇ.57ರಷ್ಟು ದರವನ್ನು ಏರಿಸಿದೆ.
ಆದರೆ ಈಗ ಉಳಿದ ಕಂಪನಿಗಳು ಏರ್ಟೆಲ್ ಹಾದಿಯಲ್ಲೆ ಸಾಗುವ ಲಕ್ಷಣಗಳು ಗೊಚರಿಸುತ್ತಿದೆ. ಹರ್ಯಾಣ ಮತ್ತು ಒಡಿಶಾಗಳಲ್ಲಿ ಏರ್ಟೆಲ್ ಕನಿಷ್ಟ ರಿಚಾರ್ಚ್ ಬೆಲೆಯನ್ನು ಶೇ.57ರಷ್ಟು ಏರಿಕೆ ಮಾಡಿದೆ.
ಈ ಹಿಂದೆ 99 ರೂ. ಗೆ ರಿಚಾರ್ಜ್ ಮಾಡಿದರೆ 28 ದಿನಗಳ ಮಾನ್ಯತೆಯೊಂದಿಗೆ 99 ರೂ. ಟಾಕ್ ಟೈಂ ಹಾಗೂ 200 ಎಂಬಿ ಡೇಟಾ ದೊರೆಯುತ್ತಿತ್ತು ಆದರೆ ಇನ್ನು ಮುಂದೆ ಈ ಪ್ಯಾಕ್ ದರ 155 ರೂ. ಆಗಿದ್ದು ಹೆಚ್ಚು ಮಾಡಲಾಗಿದೆ.
28 ದಿನಗಳ ಮಾನ್ಯತೆಯೋಂದಿಗೆ ಅನ್ಲಿಮಿಟೆಡ್ ವಾಯ್ಸ ಕಾಲ್ ಹಾಗೂ 1 ಜಿಬಿ ಡೇಟಾ ಮತ್ತು 300 ಉಚಿತ ಎಸ್ಎಂಎಸ್ ಅನ್ನು ನೀಡಲಿದೆ.